ಇದು 60 % ಕಮಿಷನ್ ಲೂಟಿ ಸರ್ಕಾರ: ಹೆಚ್ ಡಿಕೆ ಹೇಳಿಕೆ ಸಮರ್ಥಿಸಿಕೊಂಡ ಆರ್.ಅಶೋಕ್

ಬೆಂಗಳೂರು,ಜನವರಿ,7,2025 (www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ 60% ಕಮಿಷನ್ ಆರೋಪ ಮಾಡಿದ್ದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಯನ್ನು ವಿಪಕ್ಷ ನಾಯಕ ಆರ್.ಅಶೋಕ್ ಸಮರ್ಥಿಸಿಕೊಂಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ರಾಜ್ಯದಲ್ಲಿರುವುದು ಮನೆಹಾಳ ಸರ್ಕಾರ. ಇದು 60 % ಕಮಿಷನ್ ಲೂಟಿ ಸರ್ಕಾರ. ಹೆಚ್ ಡಿಕೆ ಹೇಳಿಕೆಯನ್ನ ಸಮರ್ಥನೆ ಮಾಡುತ್ತೇನೆ. ನಮ್ಮ ವಿರುದ್ದ 40% ಕಮಿಷನ್ ಆರೋಪ ಮಾಡಿದರು. ಆ ಆರೋಪಕ್ಕೆ ದಾಖಲೆ ಕೊಟ್ರಾ..?ಎಂದು ಪ್ರಶ್ನಿಸಿದರು.

ಮೊದಲು 40 ಪರ್ಸೆಂಟ್ ಕಮಿಷನ್​ ಪಡೆಯುತ್ತಿದ್ದರು.  ಈಗ 60 ಪರ್ಸೆಂಟ್ ಕಮಿಷನ್​ ಇದೆ. ಮುಂದೆ 65 ಪರ್ಸೆಂಟ್ ಪಡೆಯಬೇಕೆಂದು ಮಂತ್ರಿಮಂಡಲದಲ್ಲಿ ಚರ್ಚೆ ಆಗುತ್ತಿದೆ. 40 X 60 ಸೈಟ್​​ನಲ್ಲಿ ಮನೆ ಕಟ್ಟಲು 20 ಲಕ್ಷ ರೂಪಾಯಿ ಕೊಡಬೇಕು. ಕಳೆದ 6 ತಿಂಗಳಿನಿಂದ ಕಾಂಗ್ರೆಸ್​ ಸರ್ಕಾರದಲ್ಲಿ 60 ಪರ್ಸೆಂಟ್ ಕಮಿಷನ್​ ಇದೆ. ಹಿಂದೆ ನಮ್ಮ ವಿರುದ್ಧ 40 ಪರ್ಸೆಂಟ್ ಕಮಿಷನ್​ ಎಂದು ಫೋಟೋ ಹಿಡಿಸಿದ್ದರು. ಅದೇ ಗುತ್ತಿಗೆದಾರರಿಂದ ಈಗ 40 ಪರ್ಸೆಂಟ್ ​​ಗಿಂತ ಹೆಚ್ಚು ಕಮಿಷನ್​ ಪೀಕುತ್ತಿದ್ದಾರೆ. ಅಂದಾಜು 32 ಸಾವಿರ ಕೋಟಿ ರೂ. ಸರ್ಕಾರದಿಂದ ಬರಬೇಕಿದೆ. ಸರ್ಕಾರ ಈಗ ಮತ್ತೆ ತೆರಿಗೆಗಳನ್ನು ಹಾಕಬೇಕು ಅಷ್ಟೇ ಎಂದು ಆರ್​ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ಇದು ಮನೆಹಾಳು ಸರ್ಕಾರ ತೊಗರಿ ಖರೀದಿಗೆ ಇವರ ಬಳಿ ಹಣ ಇಲ್ಲ. ರೈತರು ಕಂಗಾಲಾಗಿದ್ದಾರೆ ಸಿಎಂ ಬಜೆಟ್ ನಲ್ಲಿ ನುಡಿದಂತೆ ನಡೆದಿದ್ದೇವೆ ಅಂತಾರೆ ಪ.ಜಾತಿಗೆ  28 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ. ಆ ಪೈಕಿ  13 ಸಾವಿರ ಮಾತ್ರ ಖರ್ಚು ಮಾಡಿದ್ದಾರೆ ಎಂದು ಕಿಡಿಕಾರಿದರು.

Key words: 60% commission, government, R. Ashok