ಜಾತಿ ಗಣತಿ ವರದಿ ಮಂಡನೆ ದುರದೃಷ್ಟಕರ- ಆರ್.ಅಶೋಕ್

ಬೆಂಗಳೂರು,ಏಪ್ರಿಲ್,11,2025 (www.justkannada.in):  ಇಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗುತ್ತಿರುವ ಜಾತಿ ಗಣತಿ ವರದಿ ಬಗ್ಗೆ ವಿರೋಧಪಕ್ಷ ನಾಯಕ ಆರ್.ಅಶೋಕ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಆರ್.ಅಶೋಕ್, ಜಾತಿಗಣತಿ ವರದಿ ಮಂಡನೆ ದುರದೃಷ್ಟಕರ.  ಜಾತಿಗಣತಿ ವರದಿ ವೈಜ್ಞಾನಕವಾಗಿ ಆಗಿಲ್ಲ. ಸಿದ್ದರಾಮಯ್ಯ ಹೇಳಿಸಿ ಮಾಡಿರುವ ಸಮೀಕ್ಷೆ ಇದು ಎಂದು ಟೀಕಿಸಿದರು.

ನಾವ್ಯಾರು ಜಾತಿಗಣತಿ ವಿರೋಧಿಗಳಲ್ಲ. ಜಾತಿಗಣತಿ ವರದಿ ವಿಚಾರದಲ್ಲಿ ರಾಜಕೀಯದ  ಗಂಧ ಇರೋದರಿಂದ ಒಪ್ಪಲು ಸಾಧ್ಯವಿಲ್ಲ.   ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸರ್ಕಾರ ಹುನ್ನಾರ ಮಾಡಿದೆ. ಮುಂದೆ ಏನಾಗುತ್ತೆ ನೋಡೋಣ ಎಂದು ಅಶೋಕ್ ತಿಳಿಸಿದರು.

Key words: caste census, report, unfortunate, R. Ashok