ಜಾತಿಗಣತಿ ವರದಿ ಚುನಾವಣೆ ಸಮಯಕ್ಕೆ ಬಹಿರಂಗಪಡಿಸಲು ಪ್ಲಾನ್: ಆರ್.ಅಶೋಕ್ ವಾಗ್ದಾಳಿ

ಬೆಂಗಳೂರು,ಏಪ್ರಿಲ್,18,2025 (www.justkannada.in): ನಿನ್ನೆ ಜಾತಿಗಣತಿ ವರದಿ ಬಗ್ಗೆ ವಿಶೇಷ ಸಭೆ ನಡೆಸಿದರೂ ಸಹ ಚರ್ಚೆ ಅಪೂರ್ಣವಾಗಿದ್ದು, ಮೇ 2ಕ್ಕೆ ಮತ್ತೆ ಚರ್ಚಿಸಲು ಸಿಎಂ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್ ಅವರು ಸರ್ಕಾರದ ನಡೆಯನ್ನ ಲೇವಡಿ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಆರ್.ಅಶೋಕ್, ಕ್ಯಾಬಿನೆಟ್ ಸಭೆ  ಕರೆದು ಈಗ ಲಿಖಿತವಾಗಿ ಕೊಡಬೇಕಂತೆ. ಮುಂದಿನ ಚುನಾವಣೆ ಸಮಯಕ್ಕೆ ವರದಿ ಬಹರಂಗಪಡಿಸಲು ಪ್ಲಾನ್ ಮಾಡಿದ್ದಾರೆ.  ಡಾಟಾ ಭರ್ತಿ ಮಾಡಲು ಶಾಲಾ ಮಕ್ಕಳನ್ನ ಬಳಸಿದ್ದಾರೆ . ಅಧಿಕಾರ ಹಸ್ತಾಂತರ ಮಾಡಬೇಕು ಅಂದಾಗ ವರದಿ ವಿಚಾರ ಬಿಟ್ಟಿದ್ದಾರೆ. ಸಿದ್ದರಾಮಯ್ಯ ಮೋಸದ ರಾಮಯ್ಯ ಎಂದು ಗುಡುಗಿದರು.

ಜಾತಿ ಜನಗಣತಿ ವರದಿ ಬಗ್ಗೆ ಎಲ್ಲ ಸಚಿವರಿಗೂ ಲಿಖಿತ ರೂಪದಲ್ಲಿ ಉತ್ತರ ನೀಡುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂಬ ಸುದ್ದಿ ಇದೆ. ಹಾಗಾದರೆ ಸಚಿವ ಸಂಪುಟದಲ್ಲಿ ಪರಸ್ಪರ ವಿಶ್ವಾಸದ ಕೊರತೆ ಇದೆಯೇ? ಲಿಖಿತ ರೂಪದಲ್ಲಿ ಉತ್ತರ ಪಡೆದುಕೊಳ್ಳುವುದರ ಹಿಂದೆ ಸಚಿವರನ್ನು ಬ್ಲಾಕ್ ಮೇಲ್ ಮಾಡುವ, ಅವರ ಹೇಳಿಕೆಗಳನ್ನ ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳುವ ಹುನ್ನಾರ ನಡೆಯಿದಿದೆಯೇ? ಎಂದು ಆರ್.ಅಶೋಕ್ ಕಿಡಿಕಾರಿದರು.

Key words: Plan, release, caste census, report , election time, R. Ashok