ಬೆಂಗಳೂರು,ಏಪ್ರಿಲ್,26,2025 (www.justkannada.in): ದೇಶಕ್ಕೆ ಸಂಕಷ್ಟಕ್ಕೆ ಬಂದಾಗ ಹೇಗೆ ನಡೆದುಕೊಳ್ಳಬೇಕು ಎಂಬುದನ್ನ ಕಾಂಗ್ರೆಸ್ ಕಲಿಯಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದರು.
ಪಹಲ್ಗಾಮ್ ಉಗ್ರರ ದಾಳಿಗೆ ಗುಪ್ತಚರ ಇಲಾಖೆ ವೈಪಲ್ಯ ಎಂಬ ಸಚಿವ ಸಂತೋಷ್ ಲಾಡ್ ಆರೋಪ ಕುರಿತು ಮಾತನಾಡಿದ ಆರ್.ಅಶೋಕ್, ಸಂತೋಷ್ ಲಾಡ್ ಇನ್ನಷ್ಟು ಪ್ರಭುದ್ದತೆ ಬೆಳೆಸಿಕೊಳಬೇಕು. ಕಾಂಗ್ರೆಸ್ ನವರು ಸೇನೆ ಬಗ್ಗೆಯೇ ಅನುಮಾನ ಪಡುತ್ತಾರಲ್ಲ. ಅಲ್ಲಿ ಯೋಧರು ಪ್ರಾಣದ ಹಂಗು ತೊರದು ಹೋರಾಡುತ್ತಿದ್ದಾರೆ. ಸೇನೆಯಿಂದಲೇ ಇಲ್ಲಿ ಲಾಡ್ ಸಂತೋಷವಾಗಿದ್ದಾರೆ. ದೇಶಕ್ಕೆ ಸಂಕಷ್ಟ ಬಂದಾಗ ಹೇಗೆ ನಡೆದುಕೊಳ್ಳಬೇಕು ಎಂದು ಕಲಿಯಲಿ. ಕಾಂಗ್ರೆಸ್ ನಾಯಕರ ಹೇಳಿಕೆಗೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ನಾನು ಯುದ್ದದ ಪರ ಅಲ್ಲ, ಶಾಂತಿಯ ಪರ ಯುದ್ದದ ಆಲೋಚನೆ ಬೇಡ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಆರ್.ಅಶೋಕ್, ಸಿದ್ದರಾಮಯ್ಯ ಹೇಳಿಕೆಯಿಂದ ಮೃತಪಟ್ಟವರಿಗೆ ಅವಮಾನ ಮಾಡಿದಂತೆ. ಕೂಡಲೇ ಸಿಎಂ ಸಿದ್ದರಾಮಯ್ಯ ಜನರ ಮುಂದೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
Key words: Congress, learn, behave, country, trouble, R. Ashok