ಬೆಂಗಳೂರು,ಜನವರಿ,16,2025 (www.justkannada.in): ರಾಜ್ಯಕಾಂಗ್ರೆಸ್ ನಲ್ಲಿ ಅಸಮಾಧಾನ ಗೊಂದಲವುಂಟಾಗಿದ್ದು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೆಲ ನಾಯಕರು ಧ್ವನಿ ಎತ್ತಿದ್ದಾರೆ. ನಿನ್ನೆಯಷ್ಟೆ ಈ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಬಹಿರಂಗ ಹೇಳಿಕೆ ನೀಡಿದ್ದು ಸಾಕಷ್ಟು ಚರ್ಚೆಯಾಗಿದೆ. ಈ ಕುರಿತು ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಆರ್.ಅಶೋಕ್, ಸಿದ್ದರಾಮಯ್ಯ ಸಿಎಂ ಸ್ಥಾನ ಬಿಡುತ್ತಿಲ್ಲ. ಡಿಕೆ ಶಿವಕುಮಾರ್ ಅಧ್ಯಕ್ಷ ಸ್ಥಾನ ಬಿಡುತ್ತಿಲ್ಲ ಮೊನ್ನೆ ಸುರ್ಜೇವಾಲ ಬಹಿರಂಗವಾಗಿ ಮಾತನಾಡಬೇಡಿ ಎಂದಿದ್ದರು. ಆದರೆ ನಿನ್ನೆಯಿಂದಲೇ ಎಲ್ಲರೂ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಬೆಳಗಾವಿಯಿಂದಲೇ ಸರ್ಕಾರ ಪತನ ಆರಂಭವಾಗುತ್ತದೆ ಎಂದು ಲೇವಡಿ ಮಾಡಿದರು.
ಇನ್ನು ಜಾತಿ ಜನಗಣತಿ ವರದಿಗೆ ನಮ್ಮ ವಿರೋಧ ಇಲ್ಲ. ಎಲ್ಲರೂ ಒಪ್ಪುವಂತೆ ಜಾತಿಗಣತಿ ಆಗಬೇಕು ಎಲ್ಲಾ ಮನೆಗಳ ಸಮೀಕ್ಷೆ ಆಗಬೇಕು. ಒಕ್ಕಲಿಗರು ಲಿಂಗಾಯಿರತನ್ನ ವಿಭಜಿಸಿದ್ದಾರೆ . ಇದೆಲ್ಲವೂ ಸಿದ್ದರಾಮಯ್ಯನವರ ಟ್ರಿಕ್ಸ್. ವೈಜ್ಞಾನಿಕವಾಗಿ ಜಾತಿಗಣತಿ ಆಗಬೇಕು ಎಂದು ಆಗ್ರಹಿಸಿದರು.
Key words: Ministers, change, KPCC president, R. Ashok