ಮೈಸೂರು,ಏಪ್ರಿಲ್,15,2023(www.justkannada.in): ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಸಚಿವ ವಿ. ಸೋಮಣ್ಣ, ಡಿಕೆ ಶಿವಕುಮಾರ್ ವಿರುದ್ದ ಸಚಿವ ಆರ್. ಅಶೋಕ್ ಸ್ಪರ್ಧೆ ಹಿಂದೆ ಆರ್ ಎಸ್ ಎಸ್ ಹಿಡನ್ ಅಜೆಂಡಾ ಅಡಗಿದೆ ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಬಲಿಷ್ಠ ಕೋಮುಗಳ ನಾಯಕತ್ವ ಬಲಿ ಕೊಡುವ ಹಿಡನ್ ಅಜೆಂಡಾ ಆರ್ ಎಸ್ ಎಸ್ ನದ್ದು. ಆರ್ ಎಸ್ ಎಸ್ ಗೆ ಒಕ್ಕಲಿಗರು, ಲಿಂಗಾಯತ ಸಮುದಾಯದ ಶಾಸಕರು ಬೇಕು. ಆದರೆ ಆ ಸಮುದಾಯದ ನಾಯಕರು ಬೇಡ. ಸೋಮಣ್ಣ ಮುಖ್ಯಮಂತ್ರಿ ಆಗುವ ವರ್ಚಸ್ಸು ಇರುವ ನಾಯಕ. ಅವರನ್ನು ಮುಗಿಸುವ ಷಡ್ಯಂತ್ರ ಮಾಡಿದೆ. ಬಲಿಷ್ಠ ಕೋಮುಗಳ ನಾಯಕರನ್ನೆ ಆರ್ ಎಸ್ ಎಸ್ ಟಾರ್ಗೆಟ್ ಮಾಡಿದೆ. ಸಂತೋಷ್ ಬಂದ ಮೇಲೆ ಬಿಜೆಪಿಯಲ್ಲಿ ಎಲ್ಲಾ ಹಾಳು ಮಾಡಿದ್ದಾರೆ. ಸೋಮಣ್ಣ, ಅಶೋಕರನ್ನು ಬಲಿ ಕೊಡಲು ಸ್ಪರ್ಧೆ ಮಾಡಿಸಲಾಗುತ್ತಿದೆ ಎಂದು ಕಿಡಿಕಾರಿದರು.
ಲಿಂಗಾಯತ ಪ್ರಬಲ ನಾಯಕ ಸೋಮಣ್ಣ ಹಾಗೂ ಅಶೋಕ್ ಅವರನ್ನು ಬಿಜೆಪಿ ಬಲಿ ಕೊಡುತ್ತಿದೆ. ಬಿಜೆಪಿಗೆ ಲಿಂಗಾಯತ ಎಂ.ಎಲ್ ಎ ಬೇಕು, ಲಿಂಗಾಯತ ನಾಯಕ ಬೇಕಿಲ್ಲ. ಅವರನ್ನು ಮುಗಿಸಲು ಆರ್ ಎಸ್.ಎಸ್ ಕುತಂತ್ರ ನಡೆಸಿದೆ. ಡಿಕೆ ಶಿವ ಕುಮಾರ್ ಒಬ್ಬ ಪ್ರಬಲ ನಾಯಕ. ಆತನ ವಿರುದ್ಧ ಅಶೋಕ್ ಹಾಕಿದ್ದಾರೆ. ಇವೆಲ್ಲವನ್ನೂ ರಾಜ್ಯದ ಜನ ಗಮನಿಸಬೇಕು. ಈ ಚುನಾಣೆಯಲ್ಲಿ ಯಡಿಯೂರಪ್ಪ ಪಾತ್ರ ಏನಿಲ್ಲ. ತಂದಾನಿ ತನೋ ಎಂದು ಕುತಿರಬೇಕು ಅಷ್ಟೇ ಎಂದು ಹೆಚ್.ವಿಶ್ವನಾಥ್ ವ್ಯಂಗ್ಯವಾಡಿದರು.
ಅವನ್ಯಾವನೋ ಸಂತೋಷ್ ಅಂತೆ ಬಿಜೆಪಿ ಹಾಳು ಮಾಡುತ್ತಿದ್ದಾನೆ. ಸಿದ‍್ಧರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧ ಅಭ್ಯರ್ಥಿ ಹಾಕಿದ್ದೀರಿ. ದಿನೇಶ್ ಗುಂಡೂರಾವ್ ವಿರುದ್ಧ ಯಾಕೆ ಹಾಕಿಲ್ಲ ಎಂದು ಬಿಜೆಪಿ ಹೈ ಕಮಾಂಡ್ ವಿರುದ್ಧ ಹೆಚ್. ವಿಶ್ವನಾಥ್ ಹರಿಹಾಯ್ದರು.
Key words: R.Ashok -V. Somanna -RSS -hidden agenda- H. Vishwanath