ಮೈಸೂರು,ಡಿಸೆಂಬರ್,2,2024 (www.justkannada.in): ವಕ್ಫ್ ಬೋರ್ಡ್ ಕ್ಯಾನ್ಸರ್ ರೀತಿ. ರಾಜ್ಯದ ರೈತರ ಜಮೀನು, ಎಸ್ಸಿ ಎಸ್ಟಿ ಜಮೀನು, ಮಠ ಮಾನ್ಯ ಆಸ್ತಿಗಳು ವಖ್ಫ್ ಬೋರ್ಡ್ ಎಂದು ಬೋರ್ಡ್ ಹಾಕಲಾಗುತ್ತಿದೆ. ಅಲ್ಪಸಂಖ್ಯತರ ತುಷ್ಟಿಕರಣ ಮುಂದಾದರೆ ಮತ್ತು ಕಾನೂನು ಸುವ್ಯವಸ್ಥೆ ಹಾಳಾದ್ರೆ ಅದಕ್ಕೆ ನೀವೇ ಕಾರಣ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದರು.
ಸಿಎಂ ತವರು ಜಿಲ್ಲೆಯಲ್ಲಿ ಬಿಜೆಪಿ ವಕ್ಫ್ ಹೋರಾಟ ಹಿನ್ನೆಲೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮೈಸೂರಿಗೆ ಭೇಟಿ ಕೊಟ್ಟು ಪರಿಶೀಲನ ನಡೆಸಿದರು. ಅಶೋಕ್ ರಿಗೆ ಮಾಜಿ ಸಚವ ಸಿಟಿ.ರವಿ, ಮಾಜಿ ಶಾಸಕ ಪ್ರೀತಂಗೌಡ, ಶಾಸಕ ಶ್ರೀವತ್ಸ ಸೆರಿ ಬಿಜೆಪಿ ನಾಯಕರ ಸಾಥ್ ನೀಡಿದರು.
ಮೈಸೂರಿನ ಗುಂಡುರಾವ್ ನಗರದ ನಿವಾಸಿಗಳ ಜೊತೆ ಸಮಾಲೋಚನೆ.
ವಕ್ಫ್ ಬೋರ್ಡ್ ಕ್ಯಾನ್ಸರ್ ರೀತಿ ರಾಜ್ಯದ ರೈತರ ಜಮೀನು, ಎಸ್ಸಿ ಎಸ್ಟಿ ಜಮೀನು, ಮಠ ಮಾನ್ಯ ಆಸ್ತಿಗಳು ವಕ್ಫ್ ಬೋರ್ಡ್ ಎಂದು ಬೋರ್ಡ್ ಹಾಕಲಾಗುತ್ತಿದೆ. ಈ ಹಿಂದೆ ಉಳುವವನೆ ಹೊಲದೊಡೆಯ ಎಂದು ಬಡಾಯಿ ಕೊಚ್ಚಿಕೊಳುತ್ತಿದ್ದರು. ಈಗ ಆ ಆಸ್ತಿ ಕೂಡ ವಕ್ಫ್ ಬೋರ್ಡ್ ದು ಎನ್ನುತ್ತಿದ್ದಾರೆ. ಮೈಸೂರು ತಾಲ್ಲೂಕಿನಲ್ಲೇ 44 ಸಾವಿರ ಎಕರೆಗೂ ಹೆಚ್ಚು ಜಾಗ ನಮ್ಮದು ಎನ್ನುತ್ತಿದ್ದಾರೆ. ಕಸಬಾ ಹೋಬಳಿಯ ಸರ್ವೇ ನಂಬರ್ 153 ರಲ್ಲಿ 1.38 ಎಕರೆ ಜಾಗ. ಈ ಜಾಗದಲ್ಲಿ ಪಾಲಿಕೆ ವತಿಯಿಂದ ಎಲ್ಲಾ ಅಭಿವೃದ್ಧಿ ಮಾಡಲಾಗಿದೆ. ಈಗ ಆ ಜಾಗಕ್ಕೆ ವಕ್ಫ್ ಬೋರ್ಡ್ ನೋಟಿಸ್ ನೀಡಿದೆ. ಅಲ್ಲಿನ ಜನರನ್ನ ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸರ್ವೇ 168 ರಲ್ಲೂ ಬೇಲಿ ಹಾಕೊಂಡಿದ್ದಾರೆ. ಆ ಜಾಗದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬ ಇಲ್ಲ. ಈಗ ಅಲ್ಲಿ ಮಸೀದಿ ನಿರ್ಮಾಣ ಮಾಡಿ ಆಜಾನ್ ಕೂಗಲಾಗುತ್ತಿದೆ. ಗುಂಡೂರಾವ್ ನಗರದ ಜನತೆ ಬೀದಿಗೆ ಬಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಇಂತ ಸಮಸ್ಯೆ ಆಗುತ್ತಿದೆ ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದರು.
ಹಿಂದೂಗಳನ್ನ ಎರಡನೇ ದರ್ಜೆಯಾಗಿ ನೋಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದೂ ಕಾಂಗ್ರೆಸ್, ನೆಹರು. 2016 ರಲ್ಲಿ ವಕ್ಫ್ ಬೋರ್ಡ್ ಬಿಲ್ ಜಾರಿ ಮಾಡಿದ್ದು ಮನಮೋಹನ್ ಸಿಂಗ್. ಕಾಂಗ್ರೆಸ್ ಪದೇ ಪದೇ ಓಟ್ ಗೋಸ್ಕರ ಇಂತಹ ಕೆಲಸ ಮಾಡುತ್ತಿದ್ದಾರೆ. ಇಡಿ ರಾಜ್ಯದಲ್ಲಿ ವಕ್ಫ್ ಆಸ್ತಿ ಬದಲಾವಣೆಗೆ ಕಾರಣ ಜಮೀರ್ ಅಹಮ್ಮದ್. ಮೈಸೂರಿನ ಮುನೇಶ್ವರ ನಗರ ಈಗ ಮುಲ್ಲಾ ನಗರ ಆಗೋಗಿದೆ. ಇಡಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಅಲ್ಪ ಸಂಖ್ಯತರ ತುಷ್ಟಿಕರಣಕ್ಕೆ ಮುಂದಾದ್ರೆ ಕಾನೂನು ಸುವ್ಯವಸ್ಥೆ ಹಾಳಾದರೆ ಅದಕ್ಕೆ ನೀವೇ ಕಾರಣ ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ರೈತರನ್ನ ವಕ್ಫ್ ಬೋರ್ಡ್ ಮುಂದೆ ನಿಲ್ಲಿಸುವ ಕೆಲಸ ಬಿಡಬೇಕು. ಮಠ ಮಾನ್ಯ ಆಸ್ತಿಗಳ ಕಬಳಿಕೆ ಕೈ ಬಿಡಬೇಕು. ವಕ್ಫ್ ಬೋರ್ಡ್ ವಿರುದ್ಧ ನಮ್ಮ ಹೋರಾಟ ಮುಂದುವರೆಯುತ್ತದೆ. ವಕ್ಫ್ ಬೋರ್ಡ್ ಬಿಲ್ ತಿದ್ದುಪಡಿ ಮಾಡೇ ಮಾಡ್ತೇವೆ.ಕಾಂಗ್ರೆಸ್ ಎಷ್ಟೇ ವಿರೋಧ ಮಾಡಿದ್ರು ಮಾಡ್ತೀವಿ ಎಂದು ಗುಡುಗಿದರು.
ಸ್ವಾಮೀಜಿಗಳನ್ನ ಯಾವುದೇ ಕಾರಣಕ್ಕೂ ಮುಟ್ಟಬಾರದು.
ಚಂದ್ರಶೇಖರ್ ಸ್ವಾಮೀಜಿ ವಿರುದ್ಧ FIR ವಿಚಾರ. ಸ್ವಾಮೀಜಿಗಳನ್ನ ಯಾವುದೇ ಕಾರಣಕ್ಕೂ ಮುಟ್ಟಬಾರದು ಎಂದು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಆರ್ ಅಶೋಕ್, ಚಂದ್ರಶೇಖರ್ ಸ್ವಾಮೀಜಿಗೆ 85 ವರ್ಷ ಆಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕಾನೂನಿಗೆ ವಿರುದ್ಧವಾಗಿದ್ರೆ ಆ ಹೇಳಿಕೆಗೆ ಕ್ಷಮೆ ಕೇಳ್ತೀನಿ ಎಂದು ಕ್ಷಮೆ ಕೇಳಿದ್ದಾರೆ. ಚುನಾವಣೆ ವೇಳೆ ಅದೇ ಸ್ವಾಮೀಜಿ ಬಳಿ ಹೋಗಿದ್ದೀರಿ. ಈಗ ಕಾನೂನಿಗಿಂತ ಯಾರು ದೊಡ್ಡವರಿಲ್ಲ ಎನ್ನುತ್ತಾರೆ ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದವರಿಗೆ ಬಿರಿಯಾನಿ ಕೊಟ್ಟು ಕಳಿಸಿದ್ರಿ. ಕಾಂಗ್ರೆಸ್ ನವರು ಮುಸಲ್ಮಾನರನ್ನ ಓಲೈಸಬೇಕು. ಹಿಂದೂಗಳಿಗೆ ನೋವಾದ್ರೆ ಅವರಿಗೆ ಏನು ಆಗಲ್ಲ. ಮುಸ್ಲಿಂ ರಿಗೆ ತೊಂದರೆಯಾದ ತಕ್ಷಣ ಕ್ರಮ ಕೈಗೊಳ್ಳುತ್ತಾರೆ ಎಂದು ಸರ್ಕಾರದ ವಿರುದ್ದ ಆರೋಪಿಸಿದರು.
ಶಾಸಕ ಯತ್ನಾಳ್ ಗೆ ನೋಟಿಸ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಆರ್.ಅಶೋಕ್, ಇದರ ಬಗ್ಗೆ ನನಗೆ ಮಾಹಿತಿಯೇ ಇಲ್ಲ ಎಂದ ಆರ್ ಅಶೋಕ್, ನೋಟಿಸ್ ಬಂದಿದಿಯೋ ಇಲ್ಲವೋ ಗೊತ್ತಿಲ್ಲ. ಪಕ್ಷದ ರಾಷ್ಟೀಯ ನಾಯಕರು ಇದರ ಬಗ್ಗೆ ಮಾತನಾಡುತ್ತಿದ್ದಾರೆ. ಒಂದು ವಾರದೊಳಗೆ ಎಲ್ಲಾ ಸಮಸ್ಯೆ ಬಗೆಹರಿಸುತ್ತದೆ ಎಂದು ಆರ್ ಅಶೋಕ್ ಹೇಳಿದರು.
Key words: Waqf controversy, Minority, breakdown, R. Ashok, AIRPRT