“ನಿರ್ಮಲ ನೆನಪು ಕಾರ್ಯಕ್ರಮ”: ಏ. 18 ಕ್ಕೆ ಆರ್‌. ರಘು ಅವರ ಎರಡು ಪುಸ್ತಕ ಬಿಡುಗಡೆ

April 18  R. Raghu's two books released .A cultural program, ``Nirmala Nenapu'', was organized on April 18 in memory of the late Nirmala, wife of R. Raghu (Kautilya), who was known in the fields of culture, politics and education.

ಮೈಸೂರು, ಏ.16,2025:  ಸಾಂಸ್ಕೃತಿಕ, ರಾಜಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಪರಿಚಿತರಾದ ಆರ್. ರಘು(ಕೌಟಿಲ್ಯ) ಅವರ ಧರ್ಮಪತ್ನಿ ದಿವಂಗತ ನಿರ್ಮಲಾ ಅವರ ನೆನಪಿನಾರ್ಥ  ʼʼನಿರ್ಮಲ ನೆನಪುʼʼ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏ. 18 ರಂದು ಆಯೋಜಿಸಲಾಗಿದೆ.

ನಗರದ ಕಲಾಮಂದಿರದಲ್ಲಿ  ಅಂದು ಮಧ್ಯಾಹ್ನ 3.30 ಕ್ಕೆ  ರಂಗನಿರ್ದೇಶಕಿ ಹಾಗೂ ನಾಟ್ಯ ವಿದುಷಿ ಡಾ. ಶಾಂಭವಿ ಸ್ವಾಮಿ ಅವರ ನಿರ್ದೇಶನದಲ್ಲಿ ವಿದ್ಯಾರ್ಥಿಗಳಿಂದ ʼಪುಣ್ಯಕೋಟಿʼ (ಗೋವಿನ ಹಾಡು) ನೃತ್ಯ ರೂಪಕದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ.

ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಸಮಾರಂಭ ಉದ್ಘಾಟಿಸುವರು . ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರು, ಬರಹಗಾರರೂ ಆದ ವಿಧಾನ ಪರಿಷತ್ ಸದಸ್ಯ ಅಡಗೂರು ವಿಶ್ವನಾಥ  ಭಾಗವಹಿಸುವರು.  ಮಾಜಿ ಶಾಸಕ ದಿವಂಗತ ಹರ್ಷಕುಮಾರ ಗೌಡ ಅವರ ಪತ್ನಿ ಕೋಮಲಾ ಹರ್ಷಕುಮಾರ ಗೌಡ  ಉಪಸ್ಥಿತರಿರುವರು.

ಪುಸ್ತಕ ಲೋಕಾರ್ಪಣೆ ಸಮಾರಂಭದ ನಂತರ ಖ್ಯಾತ ಗಾಯಕಿ ಶ್ರೀಮತಿ ಸಂಗೀತಾ ಕಟ್ಟಿ ಅವರ ಸಾರಥ್ಯದಲ್ಲಿ ʼಸಂಗೀತ ರಸಸಂಜೆ ʼ ಆಯೋಜಿಸಲಾಗಿದೆ.

ರಘು ಕೌಟಿಲ್ಯ ಅವರು 1993 ರಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ಎಲೆ ಮರೆಯ ಕಾಯಿಯಂತೆ ತಮ್ಮನ್ನು ತೊಡಗಿಸಿಕೊಂಡಿದ್ದು ಅವರ ʼಅನುಸ್ವರʼ ಕವನ ಸಂಕಲನದ ನಂತರ ಅವರ ಪತ್ನಿ ನಿರ್ಮಲ ಅವರನ್ನು ಕುರಿತು ಬರೆದಿರುವ ಹನಿಗವನ ಸಂಗ್ರಹದ ʼಭೂಮಿ ಪುತ್ರಿʼ ಲೋಕಾರ್ಪಣೆಗೊಳ್ಳಲಿದ್ದು, ರಂಗ ಅಭಿನೇತ್ರಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಹಾಗೂ ಮಾಜಿ ರಾಜ್ಯಸಭಾ ಸದಸ್ಯರೂ ಆದ ಡಾ. ಬಿ. ಜಯಶ್ರೀ ಅವರು ಇದನ್ನು ಬಿಡುಗಡೆ ಮಾಡಲಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ದಿನಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಿರುವ  ಆರ್‌. ರಘು ಅವರ ಸಮಗ್ರ ಅಂಕಣ ಬರಹಗಳ ಸಂಗ್ರಹ ʼಅಂಕಣದ ಬೆಳಕುʼ ಎಂಬ ಹೆಸರನ್ನು ಹೊತ್ತು ಪುಸ್ತಿಕೆಯ ರೂಪದಲ್ಲಿ ಹೊರಬರುತ್ತಿದ್ದು, ಇದನ್ನು ಖ್ಯಾತ ಅಂಕಣಕಾರರು, ಶಿಕ್ಷಣ ತಜ್ಞರು ಆದ ಡಾ. ಗುರುರಾಜ ಕರ್ಜಗಿ ಅವರು ಲೋಕಾರ್ಪಣೆಗೊಳಿಸುವರು.

key words:   R. Raghu,books release,`Nirmala Nenapu”,  R. Raghu (Kautilya), Mysore

SUMMARY:

April 18  R. Raghu’s two books released . A cultural program, “Nirmala Nenapu”, was organized on April 18 in memory of the late Nirmala, wife of R. Raghu (Kautilya), who was known in the fields of culture, politics and education.