ಬೆಂಗಳೂರು, ಮೇ 13, 2019 (www.justkannada.in): ವರನಟ ರಾಜ್ ಕುಟುಂಬದ ಮೂರನೇ ಕುಡಿ ಯುವ ರಾಜ್ ಕುಮಾರ್ ಅವರ ಮದುವೆಗೆ ಸಿದ್ಧತೆ ನಡೆಯುತ್ತಿದೆ. ಸದ್ಯ ರಾಜ್ ಕುಟುಂಬದ ಆಮಂತ್ರಣ ಸಿನಿತಾರೆಯರಿಗೆ ತಲುಪುತ್ತಿದೆ.
ನಟ ರಾಜಕುಮಾರ್ ಅವರ ಮೊಮ್ಮಗ, ಹಿರಿಯ ನಟ ರಾಘವೇಂದ್ರ ರಾಜಕುಮಾರ್ ಅವರ ಪುತ್ರ, ಯುವ ರಾಜಕುಮಾರ್ ವಿವಾಹ ಮಹೋತ್ಸವಕ್ಕೆ ಆಮಂತ್ರಣ ಪತ್ರಿಕೆ ಈಗಾಗಲೇ ಹಲವಾರು ನಟ ನಟಿಯರಿಗೆ ತಲುಪಿದೆ.
ನಟ ಚಿರಂಜೀವಿ ಅವರ ಕುಟುಂಬಕ್ಕೂ ಆಮಂತ್ರಣ ತಲುಪಿದೆ. ಪುನೀತ್ ರಾಜ್ ಕುಮಾರ್ , ವಿನಯ್ ರಾಜ್ ಕುಮಾರ್ ಹಾಗೂ ಯುವ ರಾಜ್ ಕುಮಾರ್ ಚಿರಂಜೀವಿ ಅವರನ್ನು ಭೇಟಿ ಮಾಡಿ ಆಮಂತ್ರಣ ಪತ್ರಿಕೆ ನೀಡಿದ್ದಾರೆ.