ಬೆಂಗಳೂರು, ಜುಲೈ 31, 2019 (www.justkannada.in): ಸ್ಯಾಂಡಲ್ವುಡ್ ಚಿತ್ರತಂಡವೊಂದು ವಿಜ್ಞಾನ ಮತ್ತು ತಂತ್ರಜ್ಞಾನ ಆಧಾರಿತ ಸಿನೆಮಾದತ್ತ ಮೊರೆಹೋಗಿದೆ.
‘ಮೈಸೂರು ಮಸಾಲಾ’ ಶೀರ್ಷಿಕೆಯಡಿ ಸಿನೆಮಾ ನಿರ್ಮಿಸುತ್ತಿದ್ದು, ಚಿತ್ರದಲ್ಲಿರುವ ಏಕೈಕ ಹಾಡಿಗೆ ಗಾಯಕ ರಘು ದೀಕ್ಷಿತ್ ಧ್ವನಿ ನೀಡಿದ್ದು, ಮತ್ತೊಮ್ಮೆ ಹಿಟ್ ಸಾಂಗ್ ನೀಡಲು ರೆಡಿಯಾಗಿದ್ದಾರೆ.
ವಾಸುಕಿ ವೈಭವ್ ಸಾಹಿತ್ಯದಲ್ಲಿ ಮೂಡಿಬಂದಿರುವ ಹಾಡು ಲಾಂಗ್ ಡ್ರೈವ್ಗೆ ಹೇಳಿ ಮಾಡಿಸಿದಂತಿದೆ ಎಂದು ‘ಮೈಸೂರು ಮಸಾಲಾ’ ನಿರ್ದೇಶಕ ಅಜಯ್ ಸರ್ಪೇಶ್ಕರ್ ಹೇಳಿದ್ದಾರೆ.