ರಾಹುಲ್ ಗಾಂಧಿ ವಿಚಾರಣೆ ವಿರೋಧಿಸಿ ‘ಕೈ’ ಪ್ರತಿಭಟನೆ: ದಿನೇಶ್ ಗುಂಡೂರಾವ್, ಡಿ.ಕೆ ಸುರೇಶ್ ಸೇರಿ ಹಲವರು ವಶಕ್ಕೆ.

ನವದೆಹಲಿ,ಜೂನ್,14,2022(www.justkannada.in): ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಅವ್ಯವಹಾರ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ  ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನ ಇಡಿ ವಿಚಾರಣೆ ನಡೆಸುತ್ತಿರುವುದನ್ನ ವಿರೋಧಿಸಿ ನವದೆಹಲಿಯಲ್ಲಿ 2ನೇ ದಿನವೂ ಕಾಂಗ್ರೆಸ್ ನಾಯಕರ ಪ್ರತಿಭಟನೆ ಮುಂದುವರೆದಿದೆ.

ನಿನ್ನೆ 10 ಗಂಟೆಗಳ ಕಾಲ ವಿಚಾರಣೆ ಎದುರಿಸುರುವ ರಾಹುಲ್ ಗಾಂಧಿ ಇಂದು ಸಹ ಇಡಿ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 2ನೇ ದಿನವೂ ಕಾಂಗ್ರೆಸ್ ನಾಯಕರು ಕಾರ್ಯಕರ್ತರ ಪ್ರತಿಭಟನೆ ಮುಂದುವರೆದಿದೆ. ಇಂದು ಕಾಂಗ್ರೆಸ್ ಕಚೇರಿ ಬಳಿ ಪ್ರತಿಭಟನೆ ನಡೆಸುತ್ತಿದ್ದ ದಿನೇಶ್ ಗುಂಡೂರಾವ್, ಸಂಸದ ಡಿ.ಕೆ ಸುರೇಶ್, ಹೆಚ್.ಕೆ ಪಾಟೀಲ್ ಅವರನ್ನ ಪೊಲೀಸರು ವಶಕ್ಕೆ ಪಡೆದರು.

ಈ ವೇಳೆ ಕಾಂಗ್ರೆಸ್ ನಾಯಕರು ಪೊಲೀಸರ ನಡುವೆ ವಾಗ್ದಾದ ನಡೆದು ಹೈಡ್ರಾಮಾ ಸೃಷ್ಠಿಯಾಯಿತು. ಈ ವೇಳೆ ಮಾತನಾಡಿರುವ ಸಂಸದ ಡಿ.ಕೆ ಸುರೇಶ್, ಪೊಲೀಸರು ನಮ್ಮನ್ನ ವಶಕ್ಕೆ ಪಡೆದಿದ್ದಾರೆ. ಎಲ್ಲಿಗೆ ಕರೆದೊಯ್ದಿದ್ದಾರೆ ಎಂದು ಹೇಳುತ್ತಿಲ್ಲ. ದಿನೇಶ್ ಗುಂಡುರಾವ್  ಅವರನ್ನೂ ಬಂಧಿಸಿದ್ದಾರೆ. ನಮ್ಮ ಕಚೇರಿಗೆ ಹೋಗಲು ಬಿಡುತ್ತಿಲ್ಲ ನಮ್ಮನ್ನ ಪೊಲೀಸರು ಕಿಡ್ನಾಪ್ ಮಾಡಿದ್ದಾರೆ ಎಂದು ಕಿಡಿಕಾರಿದರು.

Key words: Rahul Gandhi-opposes-probe-Dinesh Gundurao-DK Suresh

ENGLISH SUMMARY….

Congress protest condemning ED questioning of Rahul Gandhi: Dinesh Gundurao, D.K. Suresh and others taken into custody
New Delhi, June 14, 2022 (www.justkannada.in): The protest by Congress leaders in the State condemning the Enforcement Directorate’s (ED) move of questioning Congress leader Rahul Gandhi over the National Herald money laundering case, entered the second day today.
Yesterday Rahul Gandhi was questioned for a marathon 10 hours, and it has continued even today. The protest by the Congress leaders has continued for the second day today. Leaders Dinesh Gundurao, MP D.K. Suresh, H.K Patil, and others who were protesting near the Congress office were taken into custody by the police.
The argument between the leaders and the police led to a high drama at the venue. MP D.K. Suresh said that the police have taken them into custody, but are not revealing where they are taking us. “They have also taken Dinesh Gundurao into custody. We are not allowed to go to our office, they have kidnapped us,” he said.
Keywords: National Herald case/ Rahul Gandhi/ Congress protest/ leaders/ custody