ಮೈಸೂರು, ಅ.19,2024: (www.justkannada.in news) ರಾಯಚೂರು ಕಾಂಗ್ರೆಸ್ ಸಂಸದ ಜಿ.ಕುಮಾರನಾಯ್ಕ, ಶನಿವಾರ ಬೆಳಗ್ಗೆ ಲೋಕಾಯುಕ್ತ ಕಚೇರಿಗೆ ಆಗಮಿಸಿ ಮುಡಾ ನಿವೇಶನ ಹಂಚಿಕೆ ಪ್ರಕರಣದ ಸಂಬಂದ ಮಾಹಿತಿ ನೀಡಿದರು.
ಮುಡಾ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರದ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪ್ರಕರಣ ಕೋರ್ಟ್ ಮೆಟ್ಟಿಲು ಹತ್ತಿದ ಪರಿಣಾಮ ಇದೀಗ ಕೋರ್ಟ್ ಆದೇಶದಂತೆ ಲೋಕಾಯುಕ್ತರಿಂದ ತನಿಖೆ ನಡೆಯುತ್ತಿದೆ.
ಮುಡಾ ನಿವೇಶನ ಹಂಚಿಕೆಯಾದ ವೇಳೆ ಜಿ.ಕುಮಾರನಾಯ್ಕ್ ಮೈಸೂರು ಜಿಲ್ಲಾಧಿಕಾರಿಯಾಗಿ ಕರ್ತವ್ಯದಲ್ಲಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ಅವರಿಂದ ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ ಮಾಹಿತಿ ಹಾಗೂ ಹೇಳಿಕೆ ಪಡೆದರು.
ಈ ಬಗ್ಗೆ ” ಜಸ್ಟ್ ಕನ್ನಡ” ಜತೆ ಮಾತನಾಡಿದ ರಾಯಚೂರು ಸಂಸದ ಜಿ. ಕುಮಾರನಾಯ್ಕ್ ಅವರು ಹೇಳಿದಿಷ್ಟು..
ಮುಡಾ ನಿವೇಶನ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವಿಚಾರಣೆ ನಡೆಯುತ್ತಿದೆ. ಘಟನೆ ನಡೆದ ವೇಳೆ ನಾನು ಮೈಸೂರು ಜಿಲ್ಲಾಧಿಕಾರಿಯಾಗಿದ್ದೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತರು ನೋಟಿಸ್ ನೀಡಿ ವಿಚಾರಣೆಗೆ ಆಗಮಿಸುವಂತೆ ತಿಳಿಸಿದ್ದರು. ಅದರಂತೆ ಇಂದು ಸಮಯ ನಿಗಧಿಯಾಗಿತ್ತು. ಬೆಳಗ್ಗೆ ಲೋಕಾಯುಕ್ತ ಕಚೇರಿಗೆ ತೆರಳಿ ಅವರು ಸಿದ್ಧಪಡಿಸಿಕೊಂಡಿದ್ದ ಪ್ರಶ್ನಾವಳಿಗೆ ನನ್ನಿಂದ ಉತ್ತರ ಪಡೆದುಕೊಂಡರು. ಈ ಘಟನೆ ನಡೆದು ಇಪ್ಪತ್ತು ವರ್ಷಗಳೇ ಕಳೆದಿದ್ದು, ಭೂಸ್ವಾಧೀನದ ಪ್ರಕ್ರಿಯೆಯ ಬಗ್ಗೆ ಲೋಕಾಯುಕ್ತರು ಕೇಳಿದ ಮಾಹಿತಿಗಳನ್ನು ಒದಗಿಸಿರುವೆ. ಸುಮಾರು ಎರಡು ತಾಸುಗಳವರೆಗೆ ಪ್ರಶ್ನಾವಳಿ ನಡೆದವು ಎಂದು ಕುಮಾರನಾಯ್ಕ್ ಮಾಹಿತಿ ನೀಡಿದರು.
key words: Raichur MP Inquiry, G.Kumaranayak, district commissioner in Mysore, Lokayukta
SUMMARY:
Raichur MP Inquiry: G. Kumaranayak, a Member of Parliament from Raichur, is under investigation related to the MUDA 50:50 scam case.
Historical Context: Kumaranayak was a district commissioner in Mysore when a land conversion involving CM Siddaramaiah’s wife, Parvathi, took place.
Congress MP: Currently, Kumaranayak is a Congress MP and has been undergoing questioning at the Lokayukta for the past two hours.