ಹಾಸನ,ಮಾ,12,2020(www.justkannada.in): ನಿರ್ಮಾಣ ಹಂತದಲ್ಲಿದ್ದ ರೈಲ್ವೆ ಮೇಲ್ಸೇತುವೆ ಕುಸಿದಿರುವ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನದ ಹೊಸ ಬಸ್ ನಿಲ್ದಾಣ ಎದುರು ಈ ಘಟನೆ ನಡೆದಿದೆ. ಹಾಸನದ ಹೃದಯ ಭಾಗದಲ್ಲಿರುವ ಬಸ್ ನಿಲ್ದಾಣದಿಂದ ಎನ್ಆರ್ ವೃತ್ತದವರೆಗೆ ಮೇಲ್ಸೇತುವೆ ನಿರ್ಮಾಣವಾಗುತ್ತಿತ್ತು. 42 ಕೋಟಿ ರೂ ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿತ್ತು. ಕೇಂದ್ರ ರಾಜ್ಯದ ಸಹಭಾಗಿತ್ವದಲ್ಲಿ ಕಳೆದ ಒಂದು ವರ್ಷದಿಂದ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿತ್ತು.
ಈ ನಡುವೆ ಜೋಡಣೆ ಮಾಡಿದ್ದ ನಾಲ್ಕು ಭಾರಿ ಗಾತ್ರದ ಸಿಮೆಂಟ್ ಕಂಬಗಳು ಇಂದು ಕುಸಿದು ಬಿದಿದೆ. ರೈಲ್ವೆ ಮೇಲ್ಸೇತುವೆಗಾಗಿ ಹಲವು ವರ್ಷಗಳಿಂದ ಹೋರಾಟ ನಡೆದಿತ್ತು. ಇದೀಗ ಶೀಘ್ರ ಫ್ಲೈ ಓವರ್ ಹೊಂದುವ ಆಸೆಗೆ ದೊಡ್ಡ ವಿಘ್ನ ಎದುರಾಗಿದೆ.
Key words:hassan- Railway -bridge -collapse – construction.