ಬೆಂಗಳೂರು,ಜೂನ್,3,2024 (www.justkannada.in): ನಿನ್ನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಮಳೆರಾಯ ಅವಾಂತರ ಸೃಷ್ಠಿಸಿದ್ದು, ನಗರದಲ್ಲಿ 110.7 ಮಿಲಿ ಮೀಟರ್ ಮಳೆಯಾಗಿದೆ. ರಾತ್ರಿ ಸುರಿದ ಮಳೆಗೆ 206 ಮರಗಳು ಧರೆಗುರುಳಿವೆ.
ಬಿರುಗಾಳಿ ಮಳೆಗೆ ಬೆಂಗಳೂರಿನ ಹಲವಡೆ ಮರಗಳು ಧರೆಗುರುಳಿವೆ. ಬಸವೇಶ್ವರನಗರದಲ್ಲಿ ಮರದ ಕೊಂಬೆ ಬಿದ್ದು, ಪಾನಿಪುರಿ ಅಂಗಡಿಗೆ ಹಾನಿಯಾಗಿದೆ. ಜಯನಗರದಲ್ಲಿ ಮರದ ಕೊಂಬೆ ಬೀಳುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಕೋರಮಂಗಲ ಬಳಿ ವಿದ್ಯುತ್ ಕಂಬ, ಆಟೋ ಮೇಲೆ ಬೃಹತ್ ಮರ ಉರುಳಿ ಬಿದ್ದಿದೆ.
ಗಿರಿನಗರದ 13ನೇ ಕ್ರಾಸ್ನಲ್ಲಿ ಬೃಹತ್ ಗಾತ್ರದ ಮರ ಉರುಳಿಬಿದ್ದಿದ್ದರಿಂದ ಕಾರು ನಜ್ಜುಗುಜ್ಜಾಗಿದ್ವು. ಮರದಡಿ ಸಿಲುಕಿ 2 ಬೈಕ್ಗಳು ಜಖಂ ಆಗಿದ್ದು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ರಾಮಕೃಷ್ಣ ಆಶ್ರಮ ಬಳಿ ಬೃಹತ್ ಮರ ಬಿದ್ದು ಕಾರು ಜಖಂಗೊಂಡಿದೆ.
ಹೀಗೆ ನಗರದಾದ್ಯಂತ ಮಳೆಯರಾಯ ಅವಾಂತರ ಸೃಷ್ಠಿಸಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್, ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ. ಮಳೆಹಾನಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇವೆ. ಎಲ್ಲೆಲ್ಲಿ ಸಮಸ್ಯೆ ಆಗಿದೆಯೋ ಅಲ್ಲಲ್ಲಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ತಿಳಿಸಿದರು.
Key words: Rain, disaster, Bangalore, DK Shivakumar