ಮೈಸೂರು,ಆಗಸ್ಟ್,5,2022(www.justkannada.in): ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಮಳೆ ಅವಾಂತರ ಹಿನ್ನಲೆಯಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ 8 ರೈಲುಗಳ ಸಂಚಾರವನ್ನ ರದ್ದು ಮಾಡಲಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ಮೈಸೂರು ನೈರುತ್ಯ ರೈಲ್ವೆ ವಿಭಾಗದ ಅಧಿಕಾರಿ ಮೈಸೂರಿನಿಂದ ಬೆಂಗಳೂರು ಮುಖ್ಯ ನಿಲ್ದಾಣಕ್ಕೆ ಹೋಗುವ 8 ರೈಲುಗಳನ್ನು ರದ್ದು ಮಾಡಲಾಗಿದೆ. ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗ್ತಿದ್ದು ಗುಡ್ಡ ಕುಸಿತ ಸಂಭವಿಸುತ್ತಿದೆ. ರಸ್ತೆ, ಮನೆಗಳು, ಕೃಷಿ ಭೂಮಿ ಜಲಾವೃತವಾಗಿದೆ. ನದಿಗಳೆಲ್ಲಾ ಉಕ್ಕಿ ಹರಿಯುತ್ತಿದೆ. ಸೇತುವೆಗಳು ಮುಳುಗಿ ಹೋಗಿದ್ದು, ಅನಾಹುತಗಳು ಸಂಭವಿಸುತ್ತಿವೆ. ಜೊತೆಗೆ ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಮಳೆಯ ಅವಾಂತರ ಹಿನ್ನಲೆ. ಮೈಸೂರು ಬೆಂಗಳೂರು ನಡುವಿನ ರೈಲ್ವೇ ಸಂಚಾರ ರದ್ದು ಮಾಡಲಾಗಿದೆ ಎಂದು ಪ್ರಕಟಿಸಿದ್ದಾರೆ.
ರದ್ದಾಗಿರುವ ರೈಲುಗಳ ಮಾಹಿತಿ ಇಲ್ಲಿದೆ ನೋಡಿ
1.ರೈಲ್ವೇ ಸಂಖ್ಯೆ 06525 ಬೆಂಗಳೂರುದಿಂದ ಮೈಸೂರು ಸಂರ್ಪೂಣ ರದ್ದು
2.ರೈಲ್ವೇ ಸಂಖ್ಯೆ 06526 ಮೈಸೂರು ದಿಂದ ಬೆಂಗಳೂರು ಸಂರ್ಪೂಣ ರದ್ದು
3.ರೈಲ್ವೇ ಸಂಖ್ಯೆ 06255 ಬೆಂಗಳೂರು ದಿಂದ ಮೈಸೂರು ಸಂರ್ಪೂಣ ರದ್ದು
4.ರೈಲ್ವೇ ಸಂಖ್ಯೆ 07328 ಚಾಮರಾಜನಗರ ದಿಂದ ಮೈಸೂರು ಸಂರ್ಪೂಣ ರದ್ದು
5.ರೈಲ್ವೇ ಸಂಖ್ಯೆ ಮೈಸೂರುನಿಂದ ಎಸ್ ಎಂ ವಿ ಬೈಯಪನಹಳ್ಳಿ ಎಕ್ಸ್ ಪ್ರಸ್ ರೈಲ್ವೆ ರದ್ದು
6.ರೈಲ್ವೇ ಸಂಖ್ಯೆ ಎಸ್ ಎಂ ವಿ ಬೈಯಪನಹಳ್ಳಿ ನಿಂದ ಮೈಸೂರು ಎಕ್ಸ್ ಪ್ರಸ್ ರೈಲ್ವೆ ರದ್ದು
7.ರೈಲ್ವೇ ಸಂಖ್ಯೆ 06560 ಮೈಸೂರು ನಿಂದ ಬೆಂಗಳೂರು ಸಂರ್ಪೂಣ ರದ್ದು
ರೈಲ್ವೇ ಸಂಖ್ಯೆ 06255 ಬೆಂಗಳೂರು ನಿಂದ ಮೈಸೂರು ಸಂರ್ಪೂಣ ರದ್ದು.
Key words:rain-mysore-bangalore-train- cancel