ಮೈಸೂರು,ನವೆಂಬರ್,12,2021(www.justkannada.in): ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಚಳಿ ಪ್ರಾರಂಭವಾಗಿದೆ. ಈ ಮಧ್ಯೆ ಇತ್ತೀಚೆಗೆ ಸುರಿದ ಧಾರಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿತ್ತು. ಇದೀಗ ಮತ್ತೆ ವರುಣನ ಆರ್ಭಟ ಮುಂದುವರೆದಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಚಳಿಯ ನಡುವೆ ಬೆಳ್ಳಂಬೆಳಗ್ಗೆ ಮಳೆಯ ಸಿಂಚನ ಕಂಡು ಬಂದಿತು.
ಇತ್ತೀಚೆಗೆ ಮೈಸೂರಿನಲ್ಲಿ ಸುರಿದ್ದಿದ್ದ ಧಾರಾಕಾರ ಮಳೆ ಕೊಂಚ ಬಿಡುವು ನೀಡಿತ್ತು. ಇದೀಗ ಚಳಿಯ ಜೊತೆಗೆ ತುಂತುರು ಮಳೆಯೂ ಒಟ್ಟಿಗೆ ಸೇರಿ ಆಗಮಿಸಿದ್ದು, ಇದರಿಂದಾಗಿ ಮೈಸೂರು ಫ್ರೀಜರ್ ನಂತಾಗಿತ್ತು. ಇನ್ನು ನಗರದಲ್ಲಿ ಇಡೀ ದಿನ ತುಂತುರು ಮಳೆಯಾಗುವ ಸಾಧ್ಯತೆ ಇದೆ.
ವಾಯುಭಾರ ಕುಸಿತದಿಂದ ಇನ್ನೂ ಮೂರು ದಿನಗಳ ಕಾಲ ಮೈಸೂರಿನಲ್ಲಿ ಮಳೆಯ ಪ್ರಮಾಣ ಹೆಚ್ಚುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ. ಮೂರು ದಿನಗಳ ಕಾಲ ಇದೇ ರೀತಿ ಮಳೆ ಸುರಿಯುವ ಸಾಧ್ಯತೆ ಇದ್ದು ನಗರದಲ್ಲಿ ಮಲೆನಾಡಿನ ವಾತಾವರಣ ಕಂಡು ಬಂದಿದೆ.
Key words: rainy- morning – cultural city – Mysore- Cold