MYSORE: ರಾಜಾ ಕಾಲುವೆ ಮೇಲೆ ಅಕ್ರಮ ಕಟ್ಟಡ ತೆರುವು

MYSORE: Illegal construction on Raja Canal demolished

 

Tahsildar K.M. Mahesh Kumar, who examined the documents and confirmed them to be illegal, appeared in person today with the security of Nazarbad police and cleared them and  around Rs. 1 crore. Valuable government land has been protected.

ಮೈಸೂರು,ಆ.6,2024: (www.justkannada.in news) ರಾಜಾ ಕಾಲುವೆ ಮೇಲೆ ಅಕ್ರಮವಾಗಿ ನಿರ್ಮಾಣವಾಗಿದ್ದ ಕಟ್ಟಡವನ್ನ ತಾಲೂಕು ಆಡಳಿತ ಇಂದು ತೆರವುಗೊಳಿಸಿದೆ.

ಕುರುಬಾರಹಳ್ಳಿ ಗ್ರಾಮದ ಸರ್ವೆ ನಂ.4 ರ ಕೆ.ಸಿ.ಬಡಾವಣೆಯಲ್ಲಿ ಹಾದುಹೋಗಿರುವ ರಾಜಾಕಾಲುವೆ  ಆಕ್ರಮಿಸಿಕೊಂಡ ಚಂದ್ರಶೇಖರ್ ಎಂಬಾತ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಕಟ್ಟಡ ನಿರ್ಮಿಸಿ ವಿದ್ಯುತ್ ಹಾಗೂ ನೀರಿನ ಸಂಪರ್ಕ ಪಡೆದಿದ್ದರು.

ಜೆಸಿ ನಗರ ನಿವೇಶನ ಸಂಖ್ಯೆ 309/1 ರ ಹೆಸರಿನಲ್ಲಿ ವಲಯಕಚೇರಿ 1 ರಲ್ಲಿ ಕಂದಾಯ ಪಾವತಿಸಿ ನಕಲಿ ದಾಖಲೆ ಸೃಷ್ಟಿಸಿಕೊಂಡು ಕೆಸಿ ನಗರದಲ್ಲಿ ಅತಿಕ್ರಮಿಸಿಕೊಂಡ ರಾಜಾಕಾಲುವೆ ಮತ್ತು ಬಫರ್ ಜೋನ್ ಮೇಲೆ ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದರು. ಈ ಅಕ್ರಮದ ಬಗ್ಗೆ ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ , ತಹಸೀಲ್ದಾರ್ ರವರಿಗೆ ಲಿಖಿತ ದೂರು ನೀಡಿದ್ದರು.

ಇದರಿಂದ ಎಚ್ಚೆತ್ತ ತಹಸೀಲ್ದಾರ್ K.M.ಮಹೇಶ್ ಕುಮಾರ್ ದಾಖಲೆಗಳನ್ನ ಪರಿಶೀಲಿಸಿ ಅಕ್ರಮವೆಂದು ದೃಢಪಡಿಸಿಕೊಂಡು ಇಂದು ನಜರಬಾದ್ ಪೊಲೀಸರ ಭದ್ರತೆಯೊಂದಿಗೆ ಖುದ್ದು ಹಾಜರಾಗಿ ತೆರುವುಗೊಳಿಸಿ ಸುಮಾರು ಒಂದು ಕೋಟಿ ರೂ. ಬೆಲೆಬಾಳುವ ಸರ್ಕಾರಿ ಜಾಗ  ರಕ್ಷಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಕಸಬಾ ಹೋಬಳಿ ರೆವಿನ್ಯೂ ನಿರೀಕ್ಷಕ ಹೇಮಂತ್ ಕುಮಾರ್, ಗ್ರಾಮ ಆಡಳಿತಾಧಿಕಾರಿ ನಾಗೇಶ್, ಮೈಸೂರು ಮಹಾನಗರ ಪಾಲಿಕೆಯ ವಲಯ ಕಚೇರಿ 1 ರ ಅಧಿಕಾರಿ ಮಂಜುನಾಥ ರೆಡ್ಡಿ, ಸಹಾಯಕ ಕಂದಾಯ ಅಧಿಕಾರಿ ನಂದೀಶ್, ನಗರಪಾಲಿಕೆ ರೆವಿನ್ಯೂ ಇನ್ಸ್ಪೆಕ್ಟರ್ ಮುರುಗೇಶ್,ಚೆಸ್ಕಾಂ ಸಿಬ್ಬಂದಿಗಳು ಭಾಗವಹಿಸಿದ್ದರು.

key words: MYSORE, Illegal construction, on, Raja Canal, demolished

SUMMARY:

Tahsildar K.M. Mahesh Kumar, who examined the documents and confirmed them to be illegal, appeared in person today with the security of Nazarbad police and cleared them and around Rs. 1 crore. Valuable government land has been protected.