ಬೆಂಗಳೂರು,ಮಾರ್ಚ್,25,2021(www.justkannada.in) : ಬೆಂಗಳೂರು ನಗರದ ಕೆ.ಆರ್.ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆವರೆಗಿನ ಕೋರಮಂಗಲ ರಾಜಕಾಲುವೆಯನ್ನು (ಕೆ-100) ಜಲಮಾರ್ಗವಾಗಿ ಅಭಿವೃದ್ಧಿಪಡಿಸುವ ಹಾಗೂ ಸುಂದರೀಕರಣಗೊಳಿಸುವ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದರು.ಇದು 175 ಕೋಟಿ ರೂ. ಮೊತ್ತದ ಯೋಜನೆಯಾಗಿದ್ದು, 10 ತಿಂಗಳಲ್ಲಿ ಪೂರ್ಣವಾಗಲಿದೆ. ತ್ಯಾಜ್ಯ ನೀರನ್ನು ರಾಜಕಾಲುವೆಯಿಂದ ಬೇರ್ಪಡಿಸುವುದು. ಶುದ್ಧೀಕರಿಸಿದ ನೀರು ಹರಿಯಲು 5 ಎಂಎಲ್ ಡಿ ಎಸ್ ಟಿಪಿ ನಿರ್ಮಾಣ. ಕಾರಂಜಿ, ಪಾದಚಾರಿ ಮಾರ್ಗ ನಿರ್ಮಾಣ, ಸಿಸಿಟಿವಿ ಕ್ಯಾಮರಾ ಅಳವಡಿಕೆ, ಹಸಿರು ವಾತಾವರಣ ಸೃಷ್ಟಿ. ಇದೆಲ್ಲವನ್ನೂ ಯೋಜನೆ ಒಳಗೊಂಡಿದೆ.
ಕೆಎಸ್ಆರ್ ಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ ಇತರರು ಉಪಸ್ಥಿತರಿದ್ದರು.
key words : RajaCanal (K-100)-developed-waterway-CM-B.S.Yeddyurappa