ಬೆಂಗಳೂರು,ನವೆಂಬರ್,21,2020(www.justkannada.in): ಕರ್ನಾಟಕ ಸರ್ಕಾರದ ಐಟಿ ಬಿಟಿ ಸಚಿವಾಲಯದ ಸಹಭಾಗಿತ್ವದಲ್ಲಿ ಐಟಿ ದಿಗ್ಗಜ ಟಿಸಿಎಸ್ ನಡೆಸುವ ಗ್ರಾಮೀಣ ಐಟಿ ರಸಪ್ರಶ್ನೆ ರಾಷ್ಟ್ರೀಯ ಫೈನಲ್ಸ್ಲ್ಲಿ ರಾಜಸ್ಥಾನದ ಹಿಮಾಂಶು ಮಕರ್ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಬೆಂಗಳೂರು ತಂತ್ರಜ್ಞಾನ ಶೃಂಗಸಭೆ -2020”ರಲ್ಲಿ ಇದೇ ಮೊದಲ ಬಾರಿಗೆ ವರ್ಚುವಲ್ ರೂಪದಲ್ಲಿ ರಾಷ್ಟ್ರೀಯ ಕ್ವಿಝ್ ಫೈನಲ್ ಸ್ಪರ್ಧೆ ನಡೆಯಿತು.
ರಾಜಸ್ಥಾನದ ಸೂರತ್ ಗಢದ ಸ್ವಾಮಿ ವಿವೇಕಾನಂದ ಸರ್ಕಾರಿ ಮಾದರಿ ಶಾಲೆಯ ವಿದ್ಯಾರ್ಥಿಯಾಗಿರುವ ಹಿಮಾಂಶು ಮೊದಲ ಸುತ್ತಿನಿಂದಲೇ ಪಟಪಟನೆ ಉತ್ತರಗಳನ್ನು ನೀಡುತ್ತಾ ಅಂತಿಮ ಸುತ್ತಿನ ತನಕ ಮುನ್ನಡೆ ಕಾಯ್ದುಕೊಂಡರು. ಅಂತಿಮವಾಗಿ 350 ಅಂಕಗಳನ್ನು ಗಳಿಸಿಕೊಳ್ಳುವ ಮೂಲಕ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದರು ಜತೆಗೆ 1 ಲಕ್ಷ ರೂ. ಬಹುಮಾನ ಗೆದ್ದುಕೊಂಡರು.
300 ಅಂಕಗಳನ್ನು ಗಳಿಸಿ ತುರುಸಿನ ಪೈಪೋಟಿ ನೀಡಿದ ಮಧ್ಯಪ್ರದೇಶದ ದೇವಾಸ್ ನ ಎಕ್ಸಲೆನ್ಸ್ ಸರ್ಕಾರಿ ಶಾಲೆಯ ವಿದ್ಯಾರ್ಥಿ ಅಮನ್ ಕುಮಾರ್ ರನ್ನರ್ ಅಪ್ ಆದರು. ಇವರಿಗೆ 50 ಸಾವಿರ ರೂ. ಬಹುಮಾನ ನೀಡಲಾಯಿತು.
ಈ ಅಂತಿಮ ಸುತ್ತಿನಲ್ಲಿ ಒಟ್ಟು 6 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕರ್ನಾಟಕದ ಉಡುಪಿಯ ಪೂರ್ಣಪ್ರಜ್ಞ ಪಿಯು ಕಾಲೇಜಿನ ಸುಹಾಸ್ ಶೆಣೈ ಯು, ಗುಜರಾತ್ ನ ಭಾವನಗರದ ಪರಸ್ ಗಥಾನಿ, ಛತ್ತೀಸ್ಗಢದ ರಾಯ್ಪುರದ ತೋಮನ್ ಸೇನ್ ಹಾಗೂ ಮಹಾರಾಷ್ಟ್ರದ ವಾರ್ಧಾದ ಸಾಕ್ಷಿ ಹಿಂದೂಜಾ ಫೈನಲ್ಗೇರಿದ್ದ ಇತರ ಸ್ಪರ್ಧಿಗಳಾಗಿದ್ದರು.
5 ಸುತ್ತಿನ ಸ್ಪರ್ಧೆ
ಬೈಟ್ ಅಬಂಡೆನ್ಸ್, ಟೆಕ್ ವಿಶನ್, ಟೆಕ್ ಕ್ಲೌಡ್, ಟೆಕ್ ಅಜೈಲ್ ಮತ್ತು ಟೆಕ್ ಎಕೋಸಿಸ್ಟಮ್ ಹೀಗೆ ಐದು ವಿಭಾಗಗಳಲ್ಲಿ ರಸಪ್ರಶ್ನೆಗಳನ್ನು ಕೇಳಲಾಯಿತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗಳನ್ನು ಗುರುತಿಸುವುದು, ಐಟಿ ಕಂಪನಿಗಳು, ಉತ್ಪನ್ನಗಳ ಲೋಗೋಗಳು, ಚಿತ್ರಗಳನ್ನು ಗುರುತಿಸಿ ಅವುಗಳ ಹಿನ್ನೆಲೆಯನ್ನು ವಿವರಿಸುವುದು, ಕಂಪನಿಗಳು, ಉತ್ಪನ್ನಗಳ ಅಸ್ತವ್ಯಸ್ತಗೊಂಡ ಹೆಸರುಗಳನ್ನು ಗುರುತಿಸುವುದು, ಕಂಪನಿಗಳ ಘೋಷವಾಕ್ಯಗಳನ್ನು ಗುರುತಿಸುವ ಸವಾಲನ್ನು ಒಡ್ಡಲಾಯಿತು. ರಾಷ್ಟ್ರೀಯ ಮಟ್ಟವಾಗಿದ್ದರಿಂದ ಪ್ರಶ್ನೆಗಳು ತುಸು ಕಠಿಣವಾಗಿಯೇ ಇದ್ದವು. ಪಿಕ್ಬ್ರೈನ್ ಎಂದೇ ಹೆಸರುವಾಸಿಯಾದ ಬಾಲಸುಬ್ರಮಣಿಂ ಕ್ವಿಝ್ ಮಾಸ್ಟರ್ ಆಗಿದ್ದರು.
ದಾಖಲೆ ಸೇರಿರುವ ಕ್ವಿಜ್
ಮೆಟ್ರೋ, ರಾಜಧಾನಿ ನಗರಗಳನ್ನು ಹೊರತುಪಡಿಸಿ, ಗ್ರಾಮೀಣ ಭಾಗಗಳ ಮಕ್ಕಳಲ್ಲಿ ಮಾಹಿತಿ ತಂತ್ರಜ್ಞಾನ ಅರಿವು ಪರೀಕ್ಷಿಸುವ ಹಾಗೂ ಐಟಿ ಕುರಿತು ಆಸಕ್ತಿ ಹೆಚ್ಚಿಸುವ ಉದ್ದೇಶದೊಂದಿಗೆ ಈ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಕಳೆದ 21 ವರ್ಷಗಳಿಂದ ಈ ಕ್ವಿಝ್ ನಡೆಯುತ್ತಿದ್ದು, ಈ ತನಕ 18 ದಶಲಕ್ಷ ಮಕ್ಕಳನ್ನು ತಲುಪಿದೆ. 8 ರಿಂದ 12ನೇ ತರಗತಿಯ ತನಕದ ಮಕ್ಕಳಿಗೆ ವಿವಿಧ ಹಂತಗಳಲ್ಲಿ ನಡೆಸಲಾಗುವ ಈ ಕ್ವಿಝ್ ಈಗಾಗಲೇ ಲಿಮ್ಕಾ ದಾಖಲೆ ಸೇರಿದೆ.
ಟಿಸಿಎಸ್ ನ ಆಪರೇಶನ್ಸ್ ಮುಖ್ಯಸ್ಥ ಸುನಿಲ್ ದೇಶಪಾಂಡೆ ಅವರು ವರ್ಚುವಲ್ ಆಗಿ ಪ್ರಶಸ್ತಿ ವಿತರಣೆ ಮಾಡಿದರು. ಕರ್ನಾಟಕ ಸರ್ಕಾರದ ಐಟಿ ಬಿಟಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಜೇತ ಮಕ್ಕಳಿಗೆ ಶುಭ ಹಾರೈಸಿದರು. ಐಟಿ/ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ರಮಣ ರೆಡ್ಡಿ ಮುಖ್ಯ ಅತಿಥಿಗಳಾಗಿದ್ದರು.
English summary…
Himanshu Makar of Rajasthan is the Rural IT quiz 2020 champion
Bengaluru, Nov. 21, 2020 (www.justkannada.in): Himanshu Makar of Rajasthan has emerged as the champion of the National Rural IT quiz competition organised by the Ministry of IT and BT, Govt. of Karnataka, in association with the IT giant TCS.
The Bengaluru Tech Meet-2020 had organised the National quiz on a virtual platform. Himanshu, a student of the Swami Vivekananda Government Model School, Surathgadh, Rajasthan maintained the lead from the beginning rounds itself. He secured first place by scoring 350 marks and earned Rs. 1 lakh cash prize, followed by Aman Kumar, of the Devas Excellence Govt. School, Madhya Pradesh, who earned 300 marks and earned Rs. 50,000 cash prize.
The objective of organising this quiz programme was to educate and create interest among the rural students in the area of Information Technology. This quiz programme is being held for the last 21 years and already reached 18 million children. The quiz that is being held for students studying from 8th standard to 12th standard students in various levels has already gained a place in the Limca Book of Records.
Keywords: Rural IT quiz 2020/Bengalutu Tech Meet-2020/Himanshu makar
Key words: Rajasthan -Himanshu Makar – champion – Rural- IT Quiz 2020-bts 2020