ಬೆಂಗಳೂರು, 10, 2019 (www.justkannada.in): ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ ‘2.0’ ಸಿನಿಮಾ ಚೀನಾದಲ್ಲಿ ಬಿಡುಗಡೆಯಾಗಿದೆ. ಆದರೆ ನಿರೀಕ್ಷೆಗೆ ತಕ್ಕಂತೆ ಚೀನಾ ಜನ ಚಿತ್ರ ನೋಡುತ್ತಿಲ್ಲ.
ಸುಮಾರು 48 ಸಾವಿರ ಸ್ಕ್ರೀನ್ ಗಳಲ್ಲಿ ತೆರೆಕಂಡಿದ್ದ ತಲೈವಾ ಚಿತ್ರಕ್ಕೆ ಭಾರಿ ಮುಖಭಂಗ ಆಗಿದೆ. ಈ ಹಿಂದೆ ಅಮೀರ್ ಖಾನ್ ಅಭಿನಯದ ‘ದಂಗಲ್’ ಮತ್ತು ‘ಬಾಹುಬಲಿ’ ಚಿತ್ರಗಳಿಗೆ ಚೀನಾದಲ್ಲಿ ಭರ್ಜರಿ ಓಪನಿಂಗ್ ಸಿಕ್ಕಿತ್ತು.
ಚೀನಾ ಬಾಕ್ಸ್ ಆಫೀಸ್ 2.0 ಸಿನಿಮಾ ಮಕಾಡೆ ಮಲಗಿದೆ. ಮೊದಲ ದಿನ ಕೇವಲ 8 ಕೋಟಿ ಗಳಿಸಿದ್ದ ರೋಬೋ 2 ಮೂರು ದಿನಕ್ಕೆ 18 ಕೋಟಿ ಮಾತ್ರ ಗಳಿಸಿದೆ.