ಬೆಂಗಳೂರು,ಸೆಪ್ಟಂಬರ್15,2022(www.justkannada.in): ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ 4ನೇ ದಿನವೂ ಮುಂದುವರೆದಿದ್ದು ಮಹದೇವಪುರ, ಯಲಹಂಕ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಮಹದೇವಪುರ ವ್ಯಾಪ್ತಿಯ ಚೆಲ್ಲಘಟ್ಟ, ಶಾಂತಿನಿಕೇತನ ಲೇಔಟ್, ಎಪ್ಸಿಲೋನ್ ಮುನೇನಕೊಳಲು. ಸರ್ಜಾಪುರ ರಸ್ತೆ ವಿಪ್ರೋ, ವಾಗ್ದೇವಿ ಲೇಔಟ್ ನಲ್ಲಿ ತೆರವು ಕಾರ್ಯಾಚರಣೆಗೆ ಬಿಬಿಎಂಪಿ ಅದಿಕಾರಿಗಳು ಮುಂದಾಗಿದ್ದಾರೆ.
ಬೆಂಗಳರಿನ ಯಮಲೂರಿನ ಎಪ್ಸಿಲಾನ್ ಬಳಿ ರಾಜಕಾಲುವೆ ತೆರವು ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಬಿಬಿಎಂಪಿ ಅಧಿಕಾರಿಗಳು ಮತ್ತು ಜಮೀನು ಮಾಲೀಕರ ನಡುವೆ ವಾಗ್ವಾದ ನಡೆದಿದೆ.
ರಾಜಕಾಲುವೆ ಮಾರ್ಕಿಂಗ್ ವೇಳೆ ಗೊಂದಲ ಉಂಟಾಗಿದೆ. ಬಿಬಿಎಂಪಿ ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ. ರಾಜಕಾಲುವೆಯಿಂದ ಸಮಸ್ಯೆ ಆಗಿಲ್ಲ ಎಂದು ಮಾಲೀಕರು ವಾಗ್ವಾದ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಒತ್ತುವರಿ ತೆರವು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
Key words: Rajkaluve -encroachment – Clash –between-officials-owners.