ರಾಜ್ಯಸಭೆ ಚುನಾವಣೆ: 222 ಶಾಸಕರು ವೋಟಿಂಗ್: ಮತದಾನದಿಂದ ದೂರ ಉಳಿದ ಬಿಜೆಪಿ ಎಂಎಲ್ ಎ.

ಬೆಂಗಳೂರು,ಫೆಬ್ರವರಿ,27,2024(www.justkannada.in): ರಾಜ್ಯದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಇಂದು ಮತದಾನ ನಡೆದಿದ್ದು 222 ಶಾಸಕರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.

ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ವಿಧಾನಸೌಧದ ಕೊಠಡಿ ಸಂಖ್ಯೆ 6 ರಲ್ಲಿ ಮತದಾನ ನಡೆಯಿತು. , 223 ಶಾಸಕರ ಪೈಕಿ 222 ಮಂದಿ ಮತದಾನ ಮಾಡಿದ್ದಾರೆ.ಬಿಜೆಪಿ ಶಾಸಕ ಶಿವರಾಜ್ ಹೆಬ್ಬಾರ್ ಮಾತ್ರ ಮತದಾನದಿಂದ ದೂರ ಉಳಿದರು.

ಕಾಂಗ್ರೆಸ್ ನ 134 ಶಾಸಕರು, ಬಿಜೆಪಿಯ 65, ಜೆಡಿಎಸ್ ನ 19 ಮಂದಿ ಹಾಗೂ ಪಕ್ಷೇತರರ ನಾಲ್ವರು ಮಂದಿ ಶಾಸಕರು ಮತ ಚಲಾಯಿಸಿದ್ದಾರೆ. ಇನ್ನು ಬಿಜೆಪಿ ಶಾಸಕ ಎಸ್ ಸಿ ಸೋಮಶೇಖರ್ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಚಲಾಯಿಸುವ ಮೂಲಕ ಅಡ್ಡಮತದಾನ ಮಾಡಿದರು.

Key words: Rajya Sabha –Election-222 MLAs- Voting