ಬೆಂಗಳೂರು,ಜೂನ್,10,2022(www.justkannada.in): ಇಂದು ನಡೆಯುತ್ತಿರುವ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತದಾನ ಮಾಡಿರುವುದಾಗಿ ಹೇಳಿಕೆ ನೀಡಿದ ಜೆಡಿಎಸ್ ಶಾಸಕ ಶ್ರೀನಿವಾಸ್ಗೌಡ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಮಾನ ಮರ್ಯಾದೆ ಇದ್ದರೆ ಪಕ್ಷ ಬಿಟ್ಟು ಹೋಗಲಿ. ರಾಜೀನಾಮೆ ನೀಡಿ ಹೋಗಲಿ. ಇಂಥವರಿಗೆ ಪಕ್ಷದಿಂದ ಶಿಸ್ತು ಕ್ರಮ ಅಗತ್ಯವಿಲ್ಲ. ಈ ರೀತಿಯಾಗಿ ಮಾಡಿ ಜನರ ಮುಂದೆ ಹೇಗೆ ಹೋಗುತ್ತಾರೆ ಎಂದು ಕಿಡಿಕಾರಿದರು.
ಇಬ್ಬರು ಅಡ್ಡ ಮತದಾನದ ನಿರೀಕ್ಷೆ ಮೊದಲೇ ಇತ್ತು. ಜೆಡಿಎಸ್ಗೆ ಮತ ಹಾಕುತ್ತೇನೆ ಎಂದು ಗುಬ್ಬಿ ಶ್ರೀನಿವಾಸ್ ಹೇಳಿ ಈ ರೀತಿ ಮಾಡಿದ್ದಾರೆ. ಇಲ್ಲಿಂದ ಹೊಸ ರಾಜಕೀಯ ಚಾಪ್ಟರ್ ಶುರು ಆಗುತ್ತದೆ. ಜನ ಹೊಸ ಚಾಪ್ಟರ್ ಶುರು ಮಾಡುತ್ತಾರೆ. 8ರಿಂದ 10 ಜನ ಅಡ್ಡ ಮತದಾನ ಮಾಡುತ್ತಾರೆ ಎನ್ನುವ ಕಾಂಗ್ರೆಸ್ ನಿರೀಕ್ಷೆ ಹುಸಿಯಾಗಿದೆ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯನ ಕಾಂಗ್ರೆಸ್ ಗೆ ಗೂಟ ಹೊಡೆಯುತ್ತಾರೆ ಎಂದು ಹೆಚ್.ಡಿಕೆ ಹರಿಹಾಯ್ದರು.
Key words: rajyasabha-election-HD Kumaraswamy- against -JDS MLA