ಲಕ್ನೋ,ಏಪ್ರಿಲ್,6,2025 (www.justkannada.in): ನಾಡಿನೆಲ್ಲಡೆ ಇಂದು ರಾಮನವಮಿ ಸಂಭ್ರಮವಾಗಿದ್ದು, ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಅದ್ದೂರಿಯಾಗಿ ರಾಮನವಮಿ ಆಚರಣೆ ಮಾಡಲಾಗುತ್ತಿದೆ. ಶ್ರೀರಾಮನನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಲಾಗುತ್ತಿದೆ.
ಶ್ರೀರಾಮನ ದರ್ಶನಕ್ಕಾಗಿ ಭಕ್ತಸಾಗರ ಹರಿದು ಬರುತ್ತಿದೆ. ಅಯೋಧ್ಯೆಯಲ್ಲಿ ಜನದಟ್ಟಣೆ ಹಿನ್ನೆಲೆ ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿದೆ. ರಾಮನವಮಿ ಹಿನ್ನೆಲೆ ಶ್ರೀರಾಮನಿಗೆ ವಿಶೇಷ ಪೂಜೆ ನಡೆಯಲಿದೆ.
ಮಧ್ಯಾಹ್ನದ ವೇಳೆಗೆ ಬಾಲರಾಮನ ವಿಗ್ರಹದ ಹಣೆ ಮೇಲೆ ಸೂರ್ಯ ರಶ್ಮಿ ಬೀಳಲಿದ್ದು, ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರದಿಂದ ಕಾಯುತ್ತಿದ್ದಾರೆ .ಸಂಜೆ ಸರಯೂ ನದಿ ತೀರದ ರಾಮಕೀ ಪೌಡಯಲ್ಲಿ ಎರಡು ಲಕ್ಷ ಹಣತೆಗಳು ಬೆಳಗಲಿದೆ.
Key words: Ram Navami, Ayodhya, devotees