ಬೆಂಗಳೂರು,ಆ,11,2020(www.justkannada.in): ಕೊರೋನಾ ಹಾವಳಿ ಲಾಕ್ ಡೌನ್ ನಿಂದಾಗಿ ಮುಂದೂಡಿಕೆಯಾಗಿರುವ ಗ್ರಾಮ ಪಂಚಾಯತಿ ಚುನಾವಣೆಗೆ ಇದೀಗ ಸಿದ್ದತೆ ಆರಂಭವಾಗಿದೆ.
ಮತದಾರ ಪಟ್ಟಿ ಸಿದ್ದತೆ ಮಾಡಿಕೊಳ್ಳುವಂತೆ ರಾಜ್ಯ ಚುನಾವಣಾ ಆಯೋಗ ಪತ್ರ ಬರೆದಿದ್ದು, ಈ ಹಿನ್ನೆಲೆ ಕರಡು ಮತದಾರ ಪಟ್ಟಿ ಪ್ರಕಟಣೆ ಮಾಡಲಾಗಿದೆ. ಈ ಸಂಬಂಧ ಎಲ್ಲಾ ತಾಲ್ಲೂಕು ಕಚೇರಿಗಳಲ್ಲಿ ಮತದಾರ ಪಟ್ಟಿ ಪ್ರಕಟಗೊಳಿಸಲು ಅಯಾ ಜಿಲ್ಲೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಆಗಸ್ಟ್ 14 ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದ್ದು , ಆಗಸ್ಟ್ 31 ಕ್ಕೆ ಅಂತಿಮ ಮತದಾರ ಪಟ್ಟಿ ಪ್ರಕಟಗೊಳ್ಳಲಿದೆ. ಗ್ರಾಮಪಂಚಾಯತ್ ಚುನಾವಣೆ ಈಗಾಗಲೇ ನಡೆಯಬೇಕಿತ್ತು. ಆದರೇ ಕೋವಿಡ್ ಕಾರಣದಿಂದ ಚುನಾವಣಾ ಪ್ರಕ್ರಿಯೆಗೆ ಹಿನ್ನಡೆಯಾಗಿತ್ತು.
ಇದೀಗ ಜಿಲ್ಲಾಡಳಿತ ಗ್ರಾಮಪಂಚಾಯ್ತಿವಾರು ಮೀಸಲಾತಿ ಪಟ್ಟಿ ತಯಾರಿಸಿ ರಾಜ್ಯ ಚುನಾವಣಾ ಆಯೋಗಕ್ಕೆ ಮೀಸಲಾತಿ ಪಟ್ಟಿಯನ್ನ ಕಳುಹಿಸಿದೆ. ಮೀಸಲಾತಿ ಪಟ್ಟಿ ಸಿದ್ದಗೊಂಡ ಬೆನ್ನಲ್ಲೇ ಹಳ್ಳಿಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಲೋಕಲ್ ವಾರ್ ಸಜ್ಜುಗೊಳ್ಳಲಾಗುತ್ತಿದೆ.
Key words: Grama Panchayath- elections-Final -Voter List –Published- August 31st.