ಬೆಂಗಳೂರು, ಏಪ್ರಿಲ್ 19, 2020 (www.justkannada.in): ರಂಜಾನ್ ತಿಂಗಳ ಈ ಸಂದರ್ಭದಲ್ಲಿ ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ,ಈ ಬಾರಿ ಹಬ್ಬವನ್ನು ಹೇಗೆಲ್ಲ ಆಚರಣೆ ಮಾಡಬೇಕು ಅನ್ನೋದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚನೆಯನ್ನು ಬಿಡುಗಡೆ ಮಾಡಿದ್ದು, ಅದರ ವಿವರ ಹೀಗಿದೆ.
ದೈಹಿಕ ಅಂತರದ ಬಗ್ಗೆ ಕಟ್ಟುನಿಟ್ಟಾಗಿ ಪಾಲನೇ ಮಾಡಬೇಕು
- ಕನಿಷ್ಠ 1 ಮೀಟರ್ (3 ಅಡಿ) ಅಂತರ ಕಾಪಾಡಿಕೊಳ್ಳಬೇಕು
- ಅದರಲ್ಲೂ ಬಹಳ ಮುಖ್ಯವಾಗಿ ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ಶುಭಾಶಯಗಳನ್ನು ಕೋರುವ ವೇಳೇಯಲ್ಲಿ ಇದು ಬಹಳ ಮುಖ್ಯು
- ಮುಖ್ಯವಾಗಿ ಕೈ ಕುಲುಕುವುದು
- ತಬ್ಬಿಕೊಳ್ಳುವುದು
- ಇದಲ್ಲದೇ ಹಬ್ಬದ ನೆಪದಲ್ಲಿ ಹೆಚ್ಚಿನ ಜನತೆ ಮಾರುಕಟ್ಟೆ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡದಂತೆ ಮುನ್ನೆಚ್ಚರಿಕೆಯನ್ನು ಕಾಪಾಡಿಕೊಳ್ಳುವುದು ಅಗತ್ಯ
ಅಪಾಯದ ಗುಂಪುಗಳಿಗೆ ಸಲಹೆ
- ಅನಾರೋಗ್ಯದಿಂದ ಬಳಲುತ್ತಿರುವ ಅಥವಾ ಇನ್ಯಾವುದೇ ರೋಗದಿಂದ ಬಳಲುತ್ತಿರುವ ರೋಗಿಯನ್ನು ಇಂತಹ ಸಮಯದಲ್ಲಿ ಭಾಗವಹಿಸದಂತೆ ನೋಡಿಕೊಳ್ಳುವುದು ಉತ್ತಮ,
- ಅದರಲ್ಲೂ ಹೃದಯ ರೋಗದಿಂದ ಬಳಲುತ್ತಿರುವವರು ಹಾಗೂ, ಮಧುಮೇಹ, ದೀರ್ಘಕಾಲದ ಉಸಿರಾಟದ ಕಾಯಿಲೆ ಮತ್ತು ಕ್ಯಾನ್ಸರ್ ವಯಸ್ಸಾದವರು ಭಾಗವಹಿಸದೇ ಇರುವುದು ಉತ್ತಮ ಇಂತಹವರು ತೀವ್ರ ಕಾಯಿಲೆ ಮತ್ತು ಸಾವಿಗೆ ಗುರಿಯಾಗುವ ಸಾಧ್ಯತೆ ಹೆಚ್ಚಿದೆ.
- ರಂಜಾನ್ ಸಮಯದಲ್ಲಿ ಪ್ರಾರ್ಥನೆಗಳು, ಸಭೆಗಳು ಔತಣಕೂಡ ನಡೆಸದಂತೆ ನೋಡಿಕೊಳ್ಳುವುದು
ಸ್ಥಳಗಳ ಆಯ್ಕೆ
- ಸಾಧ್ಯವಾದರೆ ಈವೆಂಟ್ ಅನ್ನು ಹೊರಾಂಗಣದಲ್ಲಿ ಹಮ್ಮಿಕೊಳ್ಳುವುದು ಉತ್ತಮ ಆಯ್ಕೆ ಮಾಡಿಕೊಂಡ ಜಾಗದಲ್ಲಿ ಉತ್ತಮವಾದ ಗಾಳಿ ಇರಬೇಕುಈವೆಂಟ್ಗಳು ಸಾಧ್ಯವಾದಷ್ಟು ಕಡಿಮೆ ಸಂಖ್ಯೆಯಲ್ಲಿ ಇದ್ದರೇ ಒಳಿತು.ಈವೆಂಟ್ ಗಳಲ್ಲಿ ಭಾಗವಹಿಸುವವರು ಸಾಮಾಜಿಕ ದೂರವನ್ನು ಅನುಸರಣೆ ಮಾಡಬೇಕು
ಆರೋಗ್ಯಕರ ಸ್ಥಳದ ಬಗ್ಗೆ ಗಮನವಿರಬೇಕು
- ಮುಸ್ಲಿಮರು ಪ್ರಾರ್ಥನೆಗೆ ಮೊದಲು ಸಾಕಷ್ಟು ಶುಚಿತ್ವನ್ನು ಕಾಪಾಡಿಕೊಳ್ಳಬೇಕುಕೈ ತೊಳೆಯುವ ಸಾಧನಗಳು ಎಲ್ಲರಿಗೂ ಸುಲಭವಾಗಿ ದೊರಕುವಂತೆ ಮಾಡಬೇಕು
- ಅ ಲ್ಕೋಹಾಲ್ ಆಧಾರಿತ ಹ್ಯಾಂಡ್-ರಬ್ (ಕನಿಷ್ಠ 70% ಆಲ್ಕೋಹಾಲ್) ಅನ್ನು ಬಳಕೆ ಅವಕಾಶ ನೀಡಬೇಕು
- ಮಸೀದಿ ಒಳಗೆ ಮತ್ತು ಹೊರಗೆ ಕಸದ ಡಬ್ಬಿ ಮತ್ತು ಟಿಶ್ಯೂ ಪೇಪರ್ಗಳ್ನಗ್ನು ನೀಡಬೇಕುಅಂತಹ ತ್ಯಾಜ್ಯವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವುದು.
- ವೈಯುಕ್ತಿಕ ಬಟ್ಟೆಗಳನ್ನು ಹಾಸಿಕೊಳ್ಳುವುದಕ್ಕೆ ಅವಕಾಶಸಾಮಾಜಿಕ ಅಂತರಕ್ಕೆ ಮಹತ್ವ ನೀಡುವುದು
ಪೂಜಾ ಸ್ಥಳಗಳು, ತಾಣಗಳು ಮತ್ತು ಕಟ್ಟಡಗಳನ್ನು ಆಗಾಗ್ಗೆ ಸ್ವಚ್ಚ ಮಾಡಬೇಕು
- ಜನರು ಇರುವ ಸ್ಥಳಗಳನ್ನು ಬಳಸಿಕೊಂಡು ಪ್ರತಿ ಘಟನೆಯ ಮೊದಲು ಮತ್ತು ನಂತರ ಶುದ್ದವಾಗಿ ಸ್ವಚ್ಚಮಾಡಬೇಕು