ರಾಮನಗರ ಜಿಲ್ಲೆ ಹೆಸರು ಬದಲಾವಣೆ: ಡಿಸಿಎಂ ಡಿಕೆ ಶಿವಕುಮಾರ್ ಕನಸಿಗೆ ತಣ್ಣೀರೆರಚಿದ ಕೇಂದ್ರ ಸರ್ಕಾರ

ಬೆಂಗಳೂರು,ಮಾರ್ಚ್,19,2025 (www.justkannada.in):  ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಾವಣೆ ಮಾಡುವ ಡಿಸಿಎಂ ಡಿಕೆ ಶಿವಕುಮಾರ್ ಆಸೆಗೆ ಕೇಂದ್ರ ಸರ್ಕಾರ ತಣ್ಣೀರೆರಚಿದೆ.

ಹೌದು ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣಕ್ಕೆ ರಾಜ್ಯ ಸರ್ಕಾರ ಕಳುಹಿಸಿದ್ದ ಪ್ರಸ್ತಾಪವನ್ನ ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಈ ಸಂಬಂಧ ಎರಡು ತಿಂಗಳ ಹಿಂದೆಯೇ ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.

ಪತ್ರದಲ್ಲಿ ಸ್ಥಳೀಯ ನಿವಾಸಿಗಳ ವಿರೋಧ ಉಲ್ಲೇಖಿಸಿರುವ ಕೇಂದ್ರ ಗೃಹ ಸಚಿವಾಲಯ,   ವಿರೋಧ ಕಡೆಗಣಿಸಿ ಮುಂದುವರೆಯುವುದು ಬೇಡ ಕಾನೂನು ಸಮಸ್ಯೆ ಉಂಟಾಗಬಹುದೆಂದು. ಹೀಗಾಗಿ ಮರುನಾಮಕರಣ ಪ್ರಸ್ತಾವನೆ ಮುಂದುವರೆಸಬಾರದು ಎಂದು ಹೇಳಿದೆ.

Key words: Central government, rejects, proposal, change, Ramanagara district,  name