ಬೆಳಗಾವಿ,ಜನವರಿ,18,2025 (www.justkannada.in): ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಗುಡುಗಿದ್ದು ಸವಾಲೊಂದನ್ನ ಹಾಕಿದ್ದಾರೆ.
ಈ ಕುರಿತು ಮಾತನಾಡಿರುವ ಶಾಸಕ ರಮೇಶ್ ಜಾರಕಿಹೊಳಿ, ನೀನು ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್, ಇಂದಿಗೂ ಯಡಿಯೂರಪ್ಪ ನಮ್ಮ ನಾಯಕ ಅದರಲ್ಲಿ ಎರಡು ಮಾತಿಲ್ಲ. ಇಂದಿಗೂ ನಾನು ಯಡಿಯೂರಪ್ಪ ಮೇಲೆ ಅಗೌರವದಿಂದ ಮಾತಾಡಿಲ್ಲ. ಇಂದಿಗೂ ಅವರ ಮೇಲೆ ಗೌರವ ಇದೆ. ಆದ್ರೇ ನೀನು ಸುಳ್ಳು ಹೇಳುವುದು ಬಿಡು. ನಾನು ಶಿಕಾರಿಪುರಕ್ಕೆ ಬರುತ್ತೇನೆ. ವಿಜಯೇಂದ್ರ ಮನೆ ಮುಂದಿನಿಂದ ಪ್ರವಾಸ ಶುರು ಮಾಡುತ್ತೇನೆ. ನಿನ್ನ ಸವಾಲು ಸ್ವೀಕಾರ ಮಾಡಿದ್ದೇನೆ. ನೀನು ದಿನಾಂಕ ನಿಗದಿ ಮಾಡು, ಬೆಂಬಲಿಗರು ಬರಲ್ಲ, ಗನ್ ಮ್ಯಾನ್ ಬರಲ್ಲ ನಾನು ಒಬ್ಬನೇ ಬರ್ತೇನಿ, ಅಲ್ಲಿಂದ ಪ್ರವಾಸ ಆರಂಭ ಮಾಡುತ್ತೇನೆ ಸಾಧ್ಯವಾದರೆ ತಡಿ ನೋಡೋಣ ಎಂದು ಬಿವೈ ವಿಜಯೇಂದ್ರರಿಗೆ ಸವಾಲು ಹಾಕಿದರು.
ನಮ್ಮಲ್ಲಿ ಜಗಳ ಇರೋದು ಅಧ್ಯಕ್ಷರ ಬದಲಾವಣೆಗೆ ಅಷ್ಟೇ, ಅಧ್ಯಕ್ಷ ಬದಲಾವಣೆಯಾದರೆ ಓಕೆ ಇಲ್ಲವಾದರೆ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
Key words: BJP,BY Vijayendra, MLA,Ramesh Jarakiholi