ಬೆಂಗಳೂರು,ಮಾರ್ಚ್,12,2021(www.justkannada.in) : ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿರುವ ಎಸ್ ಐಟಿ ಇದೀಗ ನಾಲ್ವರನ್ನ ವಶಕ್ಕೆ ಪಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಯನ್ನ ಸೌಮೇಂದ್ರ ಮುಖರ್ಜಿ ನೇತೃತ್ವದ ಎಸ್ ಐ ಟಿ ತಂಡ ಆರಂಭಿಸಿದೆ. ಮೊದಲ ದಿನವೇ ಎಸ್ ಐಟಿ ತಂಡ ನಾಲ್ವರನ್ನ ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದೆ.
ಮೂವರು ಯುವಕರು ಓರ್ವ ಯುವತಿಯನ್ನ ಎಸ್ ಐಟಿ ವಶಕ್ಕೆ ಪಡೆದಿದೆ ಎನ್ನಲಾಗಿದೆ. ಬೆಂಗಳೂರಿನ ವಿಜಯನಗರದ ಯುವಕ ಚಾಮರಾಜಪೇಟೆಯಲ್ಲಿ ಇನ್ನೊಬ್ಬ ಯುವಕ ಹಾಗೂ ಚಿಕ್ಕಮಗಳೂರಿನ ಅಲ್ದೂರಿನ ಯುವಕ ಹಾಗೂ ಓರ್ವ ಯುವತಿ ಸೇರಿ ನಾಲ್ವರನ್ನ ವಶಕ್ಕೆ ಪಡೆಯಲಾಗಿದೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಎಸ್ ಐ ಟಿ ತನಿಖೆಗೆ ಆದೇಶಿತ್ತು. ಇಂತಹ ತನಿಖೆಯ ನೇತೃತ್ವವವನ್ನು ಸೌಮೇಂದ್ರ ಮುಖರ್ಜಿ ನೇತೃತ್ವದ ತಂಡಕ್ಕೆ ವಹಿಸಿದ್ದು ತಂಡದಲ್ಲಿ 7 ಮಂದಿ ಪೊಲೀಸ್ ಅಧಿಕಾರಿಗಳಿದ್ದಾರೆ.
Key words: Ramesh jarakiholi –Rasaleele- CD –case-SIT-investigation