ಬೆಳಗಾವಿ,ಮೇ,11,2019(www.justkannada.in): ಕಾಂಗ್ರೆಸ್ ನಾಯಕರ ನಡೆಗೆ ಅಸಮಾಧಾನಗೊಂಡು ‘ಕೈ’ ತೊರೆದು ಬಿಜೆಪಿಗೆ ಸೇರಲು ಸಿದ್ಧರಾಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇದೀಗ ಬಿಜೆಪಿ ಮುಖಂಡ ಲಕ್ಷ್ಮಣ ಸವದಿ ಜತೆ ಗುಪ್ತವಾಗಿ ಮಾತಕತೆ ನಡೆಸಿದ್ದಾರೆ.
ಅಥಣಿ ಮತ್ತು ಕಾಗವಾಡ ಮತಕ್ಷೇತ್ರ ಅಭ್ಯರ್ಥಿಗಳನ್ನ ಗೆಲ್ಲಿಸಿಕ್ಕೊಂಡು ಬಂದಿದ್ದ ರಮೇಶ್ ಜಾರಕಿಹೊಳಿ ಕಳೆದ ವಿದಾನಸಭಾ ಚುಣಾವಣೆಯಲ್ಲಿ ಲಕ್ಷ್ಮಣ ಸವದಿ ಅವರನ್ನ ಶತಾಯ ಗತಾಯ ಸೋಲಿಸಬೇಕು ಎಂದು ಹಠ ತೊಟ್ಟಿದ್ದರು. ಕಳೆದ ಭಾರಿ ಬಿಜೆಪಿಯಿಂದ ಅಥಣಿ ಕ್ಷೇತ್ರದಲ್ಲಿ ಲಕ್ಷ್ಮಣ ಸವದಿ ಸ್ಪರ್ಧೆ ಮಾಡಿ ಸೋತಿದ್ದರು. ಇದೀಗ ರಮೇಶ್ ಜಾರಕಿಹೊಳಿ ಮಾಜಿ ಸಚಿವ ಲಕ್ಷ್ಮಣ ಸವದಿ ಜೊತೆ ಗುಪ್ತವಾಗಿ ಮಿಟಿಂಗ್ ಮಾಡಿ ಚರ್ಚಿಸಿದ್ದಾರೆ.
ಈ ನಡುವೆ ರಮೇಶ್ ಜಾರಕಿಹೊಳಿ ಜೊತೆ ಅಥಣಿ ‘ಕೈ’ ಶಾಸಕ ಮಹೇಶ್ ಕುಮಟಳ್ಳಿ ರಾಜಿನಾಮೆಗೆ ಸಿದ್ದವಾಗಿದ್ದಾರೆ ಎನ್ನಲಾಗುತ್ತಿದ್ದು, ಮಹೇಶ್ ಕುಮಟಳ್ಳಿ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟ ಮೇಲೆ ಅಥಣಿಯಲ್ಲಿ ಲಕ್ಷ್ಮಣ ಸವದಿ ನಗೆ ಬಿರಲಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮಹೇಶ್ ಕುಮುಟಳ್ಳಿ ಬಿಜೆಪಿಗೆ ಬಂದರೇ ಬಿಜೆಪಿ ಸರಕಾರ ರಚನೆಯಾದ ಬಳಿಕ ಮಹೇಶ್ ಕುಮುಟಳ್ಳಿಗೆ ಒಳ್ಳೆಯ ಸ್ಥಾನಮಾನ ನೀಡುವುದಾಗಿ ಲಕ್ಷ್ಮಣ ಸವದಿ ರಮೇಶ್ ಜಾರಕಿಹೊಳಿಗೆ ಭರವಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮಹೇಶ್ ಕುಮಟೊಳ್ಳಿ ರಾಜಿನಾಮೆ ನಂತರ ಬಿಜೆಪಿ ಸೆರ್ಪಡೆಯಾಗುವ ಸಾಧ್ಯತೆ ಇದ್ದು, ಹೀಗಾಗಿ ಉಪಚುಣಾವಣೆಯಲ್ಲಿ ಅಥಣಿಯಿಂದ ಸ್ಪರ್ಧಿಸಲು ಈಗಿಂದಲೆ ಪೂರ್ವ ತಯಾರಿ ಮಾಡಿಕ್ಕೊಳ್ಳುವಂತೆ ರಮೇಶ್ ಜಾರಕಿಹೊಳಿ ಲಕ್ಷ್ಮಣ ಸವದಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಮೈತ್ರಿ ಸರಕಾರ ಪತನಕ್ಕೆ ಕೌಂಡೌನ್ ಶುರುವಾಯ್ತಾ, ಮೇ 23ರ ಬಳಿಕ ದೋಸ್ತಿ ಸರಕಾರ ಪತನವಾಗಲಿದೆಯಾ ಎಂಬ ಕುತೂಹಲ ಮೂಡಿದೆ.
Key words: Ramesh Jarakiholi-secret -talks – former minister- Laxman Savadi.