ಬೆಂಗಳೂರು,ಜನವರಿ,16,2021(www.justkannada.in): 9 ಕೋಟಿ ರೂ ಖರ್ಚು ಮಾಡಿ ಸರ್ಕಾರ ಕೆಡವಿದ್ರು. ಅದರಿಂದಾಗಿ ಸಿ.ಪಿ ಯೋಗೇಶ್ವರ್ ಮಂತ್ರಿಯಾಗಿದ್ದಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ಅವರೇ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಯಾಗಲಿ ಎಂದು ವಿಧಾನಸಭೆ ವಿಪಕ್ಷನಾಯಕ ಸಿದ್ಧರಾಮಯ್ಯ ಆಗ್ರಹಿಸಿದರು.
ಬೆಂಗಳೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಸಿಎಂ ಬಿಎಸ್ ಯಡಿಯೂರಪ್ಪ ಅಪರೇಷನ್ ಕಮಲದ ಜನಕ. ಅಪರೇಷನ್ ಕಮಲದ ನಿರ್ಮಾತೃ. ಜನರ ಆಶೀರ್ವಾದದಿಂದ ಅವರು ಮುಖ್ಯಮಂತ್ರಿಯಾಗಿಲ್ಲ. ನಮ್ಮ ಶಾಸಕರನ್ನ ಖರೀದಿ ಮಾಡಿ ಸಿಎಂ ಆಗಿದ್ದಾರೆ ಎಂದು ಟೀಕಿಸಿದರು.

ಹಾಗೆಯೇ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಹಿರಿಯ ನಾಯಕ. ಸಿಡಿ ಇದೆ ಎಂದು ಅವರು ಬಾಯಿ ಬಿಟ್ಟು ಹೇಳಿದ್ದಾರೆ. ಬಿಎಸ್ ವೈ ಕೊಳಕು ಸಿಡಿ ಇದೆ ಎಂದು ಹೇಳಿದ್ದಾರೆ ಎಂದು ಸಿದ್ಧರಾಮಯ್ಯ ಲೇವಡಿ ಮಾಡಿದರು.
Key words: Ramesh jarakiholi-statement-former cm- Siddaramaiah