ಬೆಂಗಳೂರು,ಮಾರ್ಚ್,10,2021(www.justkannada.in): ರಮೇಶ್ ಜಾರಕಿಹೊಳಿ ಸಿಡಿ ಬಯಲು ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ, ಸಿಡಿಯನ್ನು ಮಾಡಿದ್ದು ಕಾಂಗ್ರೆಸ್ ನವರೇ,ಇನ್ಯಾರು ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ರಮೇಶ್ ಜಾರಕಿಹೊಳಿ ಸಿಡಿ ಯನ್ನು ಮಾಡಿದ್ದು ಕಾಂಗ್ರೆಸ್ ನವರೇ, ಮತ್ಯಾರು ಮಾಡ್ತಾರೆ, ಇಂತಹ ಮನೆಹಾಳ್ ಕೆಲಸ ಮಾಡೋದು ಕಾಂಗ್ರೆಸ್ ನವರೇ. ನಾನು 20 ವರ್ಷ ಕಾಂಗ್ರೆಸ್ ನಲ್ಲಿ ಇದ್ದೆ. ಅವರು ಏನು ಮಾಡುತ್ತಾರೆಂದು ನನಗೆ ಚೆನ್ನಾಗಿ ಗೊತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಸಿಡಿ ಪ್ರಕರಣವನ್ನು ಸಿಬಿಐಗೆ ವಹಿಸಲಿ ಎಂದು ಒತ್ತಾಯಿಸಿದ್ದೇನೆ. ಸಿಬಿಐ ತನಿಖೆಯಿಂದ ಎಲ್ಲವೂ ಆಚೆಗೆ ಬರುತ್ತದೆ. ರಾಜಕೀಯವಾಗಿ ಸವಾಲು ಹಾಕಲಿ, ತಾಕತ್ತಿದ್ದರೆ ನನ್ನ ಹಾಗೂ ರಮೇಶ್ ಜಾರಕಿಹೊಳಿ ವಿರುದ್ಧ ಸ್ಪರ್ಧಿಸಲಿ ಎಂದು ಎಸ್.ಟಿ ಸೋಮಶೇಖರ್ ಸವಾಲು ಹಾಕಿದರು.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಿಂದ ಅವರ ಮಾನ-ಮರ್ಯಾದೆ ಏನಾಯಿತು. ರಾಜಕೀಯ ಷಡ್ಯಂತ್ರದಿಂದ ಮಾನ ಹಾನಿಯಾಗಬಾರದು. ಹೀಗಾಗಿ ನಾವು ಆರು ಜನ ಸಚಿವರು ಕೋರ್ಟ್ ಗೆ ಮೊರೆ ಹೋಗಿದ್ದೇವೆ ಎಂದು ಕೋರ್ಟ್ ಗೆ ಹೋಗಿದ್ದಕ್ಕೆ ಸಚಿವ ಎಸ್.ಟಿ ಸೋಮಶೇಖರ್ ಸ್ಪಷ್ಟನೆ ನೀಡಿದರು.
ENGLISH SUMMARY….
Sex CD is Congress made – New bomb from Minister S.T. Somashekar
Bengaluru, Mar. 10, 2021 (www.justkannada.in): Regarding the furor over former Minister Ramesh Jarkiholis alleged sex CD row, Cooperation Minister S.T. Somashekar has thrown a new bomb by saying that the CD is produced by the Congress party.
Speaking to the press persons today he said, “it is produced by the Congress party, who else will make this? Only Congress people can do such type of dirty works. I was in the Congress for nearly 20 years, I know about those people very well,” he alleged.
“I demand to hand over the issue to the CBI, everything will come out then. Let them challenge politically, let them win against me and Ramesh Jarkiholi,” he said.
“What happened to the dignity and respect of Ramesh Jarkiholi in this incident. Any person’s dignity should not be marred due to political conspiracy. Hence, six of us appealed before the court,” he clarified.
Keywords: Minister S.T. Somashekar/ new bomb/ sex CD produced by Congress party/ former Minister Ramesh Jarkiholi
Key words: ramesh jarkiholi-CD –Congress-Minister- ST Somashekhar – new bomb