ಬೆಂಗಳೂರು, ಮಾರ್ಚ್,8,2024(www.justkannada.in): ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬರ್ ಬಗ್ಗೆ ಎನ್ ಐಎ ಮತ್ತೆರೆಡು ವಿಡಿಯೋಗಳನ್ನ ಬಿಡುಗಡೆ ಮಾಡಿದೆ.
ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಎನ್ ಐಎ ಆರೋಪಿ ಪತ್ತೆಗೆ ನೆರವಾಗಲೆಂದು ಬಾಂಬರ್ ಓಡಾಡಿರುವ ಮತ್ತೆರೆಡು ವಿಡಿಯೋಗಳನ್ನ ಬಿಡುಗಡೆ ಮಾಡಿದೆ. ಎನ್‌ಐಎಯಿಂದ ಬಾಂಬರ್ ಬಿಎಂಟಿಸಿ ಬಸ್ ನಲ್ಲಿ ಹತ್ತಿರುವ ವೀಡಿಯೋ ಬಿಡುಗಡೆ ಮಾಡಲಾಗಿದೆ.
ಇಲ್ಲದೇ ರಾಮೇಶ್ವರಂ ಕೆಫೆಯ ಸ್ಪೋಟದ ಆರೋಪಿ ಬಸ್ ನಿಲ್ದಾಣವೊಂದರಲ್ಲಿ ಓಡಾಡುತ್ತಿರುವ ವೀಡಿಯೋವನ್ನು ಕೂಡ ರಿಲೀಸ್ ಮಾಡಲಾಗಿದೆ. ಈ ಎರಡು ವೀಡಿಯೋಗಳನ್ನು ಆರೋಪಿ ಪತ್ತೆಗೆ ನೆರವಾಗಲೆಂದು ಎನ್ ಐಎ ಬಿಡುಗಡೆ ಮಾಡಿರುವುದಾಗಿ ತಿಳಿದು ಬಂದಿದೆ.
ಕೆಫೆ ಬಾಂಬರ್ ನ ಪತ್ತೆಗಾಗಿ 500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳ ಪರಿಶೀಲನೆ ನಡೆಸಲಾಗಿದೆ. 10 ಲಕ್ಷ ಬಹುಮಾನ ಘೋಷಿಸಲಾಗಿದೆ. ಶಂಕಿತನ ರೇಖಾಚಿತ್ರ ಸಿದ್ಧಪಡಿಸಲಾಗಿದೆ. ಸಿಸಿಬಿ ಟೀಂ, ಎನ್‌ಐಎ ಅಧಿಕಾರಿಗಳು ಹಲವು ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.
Key words: Rameswaram cafe -bomb blast –case- NIA -released -two – videos