ನವದೆಹಲಿ,ಮೇ,10,2019(www.justkannada.in): ಅಯೋಧ್ಯೆಯಲ್ಲಿ ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನ ಅಗಸ್ಟ್ 15ಕ್ಕೆ ಸುಪ್ರೀಂಕೋರ್ಟ್ ಮುಂದೂಡಿದೆ.
ಅಯೋಧ್ಯೆಯಲ್ಲಿ ರಾಮಜನ್ಮಭೂಮಿ ವಿವಾದ ಸಂಬಂಧ ಇಂದು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿತು. ಮಧ್ಯಸ್ಥಿಕೆ ಸಮಿತಿ ಮುಚ್ಚಿದ ಲಗೋಟೆಯಲ್ಲಿ ವರದಿ ಸಲ್ಲಿಸಿತು. 13,500ಪುಟಗಳ ಭಾಷಾನುವಾದ ಹಿನ್ನೆಲೆ ಕಾಲಾವಕಾಶ ನೀಡುವಂತೆ ಸುಪ್ರೀಂಕೋರ್ಟ್ ಗೆ ಮಧ್ಯಸ್ಥಿಕೆ ಸಮಿತಿ ಕೋರಿತು.
ಮಧ್ಯಸ್ಥಿಕೆ ಪ್ರಕ್ರಿಯೆ ಜಾರಿಯಲ್ಲಿದೆ. ಅಗಸ್ಟ್ 15ರೊಳಗೆ ಮಧ್ಯಸ್ಥಿಕೆ ಪ್ರಕ್ರಿಯೆ ಮುಗಿಸಿ ಎಂದು ಸಿಜೆಐ ನೇತೃತ್ವದ ಸಾಂವಿಧಾನಿಕ ಪೀಠ ಅಗಸ್ಟ್ 15ರವರೆಗೆ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿತು. ಸಂಧಾನದ ಮೂಲಕ ಅಯೋಧ್ಯೆಯಲ್ಲಿ ರಾಮಜನ್ಮಭೂಮಿ ವಿವಾದ ಬಗೆ ಹರಿಸಲು ಸಮಿತಿ ರಚಿಸಿತ್ತು. ಅಲ್ಲದೆ 8 ವಾರಗಳಲ್ಲಿ ಸಂದಾನ ಪ್ರಕ್ರಿಯೆ ಸಂಪೂರ್ಣ ವರದಿ ನೀಡುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು.
summary…
SC on Ayodhya :#AyodhyaCase : Three-members Mediation panel seeks extension of time to find an amicable solution. Supreme Court grants time till August 15. CJI also says, “we’re not going to tell you what progress has been made, that’s confidential”,
Key words: Ramjanmabhoomi -controversy – Ayodhya-trial -postponed – August 15.