ಬೆಂಗಳೂರು, ಜನವರಿ 03, 2019 (www.justkannada.in): ನೂತನ ವರ್ಷದ ಮೊದಲ ರಣಜಿ ಕ್ರಿಕೆಟ್ ಪಂದ್ಯದಲ್ಲಿ ಕರ್ನಾಟಕ-ಮುಂಬಯಿ ಎದುರಾಗಲಿವೆ.
ಮುಂಬಯಿ ಪಾಲಿಗೆ ಇದು ತವರು ಪಂದ್ಯವಾಗಿದ್ದು, ‘ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಕ್ರೀಡಾಂಗಣ’ದಲ್ಲಿ ಈ ಬಹು ನಿರೀಕ್ಷಿತ ಮುಖಾಮುಖೀ ಏರ್ಪಡಲಿದೆ.
ಎರಡೂ ತಂಡಗಳು ಪ್ರಸಕ್ತ ಋತುವಿನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿವೆ. ಅದರಲ್ಲೂ ಮುಂಬಯಿ ಕಳೆದ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ತವರಿನ “ವಾಂಖೇಡೆ ಸ್ಟೇಡಿಯಂ’ನಲ್ಲೇ 10 ವಿಕೆಟ್ಗ ಆಘಾತಕಾರಿ ಸೋಲನ್ನುಂಡಿತ್ತು.