ಮೈಸೂರು,ಅಕ್ಟೋಬರ್,4,2021(www.justkannada.in): ಕೊರೋನಾ ಹಿನ್ನೆಲೆ ಈ ಬಾರಿಯೂ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನ ಸರಳವಾಗಿ ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಿರುವ ಹಿನ್ನೆಲೆ, ಕಳೆಗುಂದಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ದಸರಾ ರಂಗೋತ್ಸವ ವಿಶೇಷ ಮೆರಗು ನೀಡಲಿದೆ.
ಹೌದು, ಅಕ್ಟೋಬರ್ 7 ರಿಂದ 14ರವರೆಗೆ 8 ದಿನಗಳ ಕಾಲ ರಂಗಾಯಣ ವತಿಯಿಂದ ರಂಗೋತ್ಸವ ಮಾಡಲು ನಿರ್ಧರಿಸಲಾಗಿದೆ. ಈ ಕುರಿತು ಮಾಹಿತಿ ನೀಡಿದ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಕೋವಿಡ್ ನಂತರ ಕಳೆದ ವರ್ಷ ಮೈಸೂರು ರಂಗಾಯಣಕ್ಕೆ ಅನುದಾನ ನೀಡಿಲ್ಲ. ಈ ಬಾರಿಯೂ 5 ಲಕ್ಷ ಅನುದಾನ ರಂಗಾಯಣಕ್ಕೆ ನೀಡುವಂತೆ ಮನವಿ ಮಾಡಲಾಗಿದೆ. ಅನುದಾನ ನೀಡದಿದ್ದರೂ 8 ದಿನಗಳ ಕಾಲ ದಸರಾ ರಂಗೋತ್ಸವ ಮಾಡಲಾಗುತ್ತಿದೆ. ನವರಾತ್ರಿ ರಂಗೋತ್ಸವವನ್ನು ಉಳಿಸುವ ನಿಟ್ಟಿನಲ್ಲಿ ಆಯೋಜನೆ ಮಾಡಲಾಗಿದೆ ಎಂದಿದ್ದಾರೆ.
ಅಕ್ಟೋಬರ್ 7 ರಂದು ವಿಧುರಾಶ್ವತ್ಥ ಹೋರಾಟದ ಕಥನಾ ಬಿಂಬಿಸುವ ಹತ್ಯಾಕಾಂಡ ನಾಟಕ ಪ್ರದರ್ಶನ. ಅಕ್ಟೋಬರ್ 9,10ರಂದು ಎರಡು ದಿನಗಳ ಪರ್ವ ನಾಟಕ ರಂಗ ಪ್ರದರ್ಶನ. 11 ,12 ರಂದು ಸೂತ್ರಧಾರ ನಾಟಕ ಪ್ರದರ್ಶನ. ಅಕ್ಟೋಬರ್ 13,14 ರಂದು ವೈದೇಹಿ ಅವರ ಮೂಕನ ಮಕ್ಕಳು ನಾಟಕ ಪ್ರದರ್ಶನವಾಗಲಿದೆ.
ಅಕ್ಟೊಬರ್ 7 ರಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಮೇಶ್ವರಿ ವರ್ಮ ಅವರು ದಸರಾ ರಂಗೋತ್ಸವ ಉದ್ಘಾಟಿಸಲಿದ್ದಾರೆ. ಕಾಲಸೇವೆ ಗುರುತಿಸಿ ರಂಗಾಯಣ ದಸರಾ ರಂಗಗೌರವ ಸಲ್ಲಿಸಲಿದೆ ಎಂದು ಅಡ್ಡಂಡ ಕಾರ್ಯಪ್ಪ ತಿಳಿಸಿದರು.
Key words: Rangayana -Dasara Rangotsava – eight days-mysore