ಅತ್ಯಾಚಾರ ಪ್ರಕರಣ: ವಕೀಲ ದೇವರಾಜೇಗೌಡರಿಗೆ ಜಾಮೀನು ಮಂಜೂರು

ಬೆಂಗಳೂರು,ಜುಲೈ,1,2024 (www.justkannada.in): ಅತ್ಯಾಚಾರ ಪ್ರಕರಣದಲ್ಲಿ ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ  ವಕೀಲ ದೇವರಾಜೇಗೌಡರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.  ಜಾಮೀನು ಕೋರಿ ದೇವರಾಜೇಗೌಡರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ  ನ್ಯಾ. ಎಂ. ಜಿ ಉಮಾ ಅವರಿದ್ದ ಹೈಕೋರ್ಟ್ ಏಕಸದಸ್ಯಪೀಠ ಜಾಮೀನು ಮಂಜೂರು ಮಾಡಿದೆ.

ದೇವರಾಜೇಗೌಡ ಪರ ವಾದ ಮಂಡಿಸಿದ  ಅರುಣ್ ಶ್ಯಾಮ್, 2023 ಡಿಸೆಂಬರ್ 29 ರಂದು ಅತ್ಯಾಚಾರವೆಂದು ಏಪ್ರಿಲ್ 1 ರಂದು ಸಂತ್ರಸತ್ಎ ದೂರು ನೀಡಿದ್ದಾರೆ. ಇದಕ್ಕೂ ಮೊದಲು ಹನಿಟ್ರ್ಯಾಪ್ ಎಂದು ದೇವರಾಜೇಗೌಡರು ಮಾರ್ಚ್ 28 ರಂದು ದೂರು ನೀಡಿದ್ದಾರೆ  ಮಾರ್ಚ್ 29 ರಂದು ದೇವರಾಜೇಗೌಡರ ವಿರುದ್ದ ಸಂತ್ರಸ್ತೆ ಪತಿ ದೂರು ನೀಡಿದ್ದಾನೆ.  ಆದರೆ ಅತ್ಯಾಚಾರ ಬಗ್ಗೆ ಯಾವುದೇ ಚಕಾರ  ಇಲ್ಲ. ಆ ಪ್ರಕರಣದಲ್ಲಿ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಘಟನೆಯ ಬಳಿಕ 90 ದಿನ ವಿಳಂಬವಾಗಿ ದೂರು ನೀಡಿದ್ದಾರೆ.  ವಿಡಿಯೋ ಕರೆ ಏಕೆ ಸ್ವೀಕರಿಸಿದ್ದಾರೆ ಎಂಬುದಕ್ಕ ಸಮರ್ಥನೆ ಕಂಡು ಬರುತ್ತಿಲ್ಲ ಎಂದು ವಾದಿಸಿದರು.

Key words:  Rape case, Lawyer, Devaraj Gowda, bail