ಬೆಂಗಳೂರು, ಜೂನ್ 30, 2020 (www.justkannada.in): ನಟಿ ರಶ್ಮಿಕಾ ಪ್ರಿನ್ಸ್ ಮಹೇಶ್ ಬಾಬು ಅವರಿಗೆ ಸ್ಪೆಷಲ್ ಗಿಫ್ಟ್ ವೊಂದನ್ನು ಕಳುಹಿಸಿದ್ದಾರೆ.
ಹೌದು. ಲಾಕ್ಡೌನ್ ವೇಳೆ ರಶ್ಮಿಕಾ ತಮ್ಮ ತೋಟದಲ್ಲಿ ಬೆಳೆದ ಬಟರ್ ಫ್ರೂಟ್, ಸಿಹಿಯಾದ ಜೇನು ತುಪ್ಪ, ಮಾವಿನಹಣ್ಣಿನ ಉಪ್ಪಿನಕಾಯಿ ಸೇರಿದಂತೆ ಕೆಲವು ಆರ್ಗ್ಯಾನಿಕ್ ಆಹಾರ ಪದಾರ್ಥಗಳನ್ನು ಪ್ರಿನ್ಸ್ ಮಹೇಶ್ ಬಾಬು ಅವರ ಮನೆಗೆ ಕೊಡಗಿನಿಂದ ಕಳುಹಿಸಿದ್ದಾರೆ.
ರಶ್ಮಿಕಾ ನೀಡಿದ ಉಡುಗೊರೆಯಿಂದಾಗಿ ಪ್ರಿನ್ಸ್ ಪತ್ನಿ ನಮ್ರತಾರ ಮುಖದಲ್ಲಿ ಮಂದಹಾಸ ಮೂಡಿದೆ. ಇದು ನಮ್ಮ ಮೊದಲ ಮಾನ್ಸೂನ್ ಹಾಗೂ ಲಾಕ್ಡೌನ್ ಉಡುಗೊರೆ ಎಂದಿರುವ ನಮ್ರತಾ, ರಶ್ಮಿಕಾಗೆ ಧನ್ಯವಾದ ತಿಳಿಸಿದ್ದಾರೆ.