ಪಡಿತರ ಚೀಟಿದಾರರಿಗೆ ಇ-ಕೆವೈಸಿ ಮಾಡಿಸಲು ಏ.30 ಕೊನೇ ದಿನ

ಮೈಸೂರು,ಏಪ್ರಿಲ್,16,2025 (www.justkannada.in): ಪಡಿತರ ಚೀಟಿದಾರರಿಗೆ ಇ-ಕೆವೈಸಿ ಮಾಡಿಸಲು ಏಪ್ರಿಲ್ 30 ಕೊನೆಯ ಅವಕಾಶವಿದ್ದು ಇ-ಕೆವೈಸಿ ಮಾಡಿಸದವರು ಹತ್ತಿರದ ನ್ಯಾಯಬೆಲೆ ಅಂಗಡಿಗೆ ತೆರಳಿ ಇಕೆವೈಸಿ ಮಾಡಿಸುವಂತೆ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಮನವಿ ಮಾಡಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಡಿಸಿ ಲಕ್ಷ್ಮಿಕಾಂತ ರೆಡ್ಡಿ, ರೇಷನ್ ಕಾರ್ಡ್ ಹೊಂದಿರುವ ಎಲ್ಲಾ ಸದಸ್ಯರ ಇ.ಕೆವೈಸಿ ಕಡ್ಡಾಯವಾಗಿದೆ. ಈವರಗೆ ಇ-ಕೆವೈಸಿ ಮಾಡಿಸದಿರುವ ಸದಸ್ಯರು ಹತ್ತಿರದ ನ್ಯಾಯಬೆಲೆ ಅಂಗಡಿಗೆ ಸೂಕ್ತ ದಾಖಲೆಗಳೊಂದಿಗೆ ತೆರಳಿ ಇ-ಕೆವೈಸಿ ಮಾಡಿಸಬೇಕು

ಇ-ಕೆವೈಸಿ ಮಾಡಿದುವುದು ಸಂಪೂರ್ಣ ಉಚಿತ. ಪಡಿತರ ಚೀಟಿ, ಆಧಾರ್ ಕಾರ್ಡ್  ಗ್ಯಾಸ್ ಕನೆಕ್ಷನ್ ಪುಸ್ತಕ, ಎಸ್ಸಿ ಎಸ್ಟಿ ಆದರೆ ಜಾತಿ ಪ್ರಮಾಣ ಪತ್ರ ದಾಖಲೆಗಳ ಸಲ್ಲಿಸಬೇಕು ಎಂದು ಡಿಸಿ ಲಕ್ಷ್ಮಿಕಾಂತ ರೆಡ್ಡಿ ಸಾರ್ವಜನಿಕರಲ್ಲಿ  ಮನವಿ ಮಾಡಿದ್ದಾರೆ.

Key words: April 30, ration card, holders, e-KYC