ಮೈಸೂರು,ಏಪ್ರಿಲ್,29,2021(www.justkannada.in): ಅನ್ನಭಾಗ್ಯ ಯೋಜನೆಯಡಿ ಪಡಿತರ ಅಕ್ಕಿ ಕಡಿತದ ಸರ್ಕಾರದ ನಿರ್ಧಾರದ ವಿರುದ್ಧ ಕಾಂಗ್ರೆಸ್ ಪಕ್ಷದ ವತಿಯಿಂದ ಪೋಸ್ಟ್ ಕಾರ್ಡ್ ಚಳುವಳಿ ನಡೆಸಲಾಗುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ ರಾಜ್ಯದ ಜನತೆಯ ಅಭಿಪ್ರಾಯ ಸಂಗ್ರಹಿಸಿ ಪೋಸ್ಟ್ ಕಾರ್ಡ್ ಚಳುವಳಿ ನಡೆಸಲಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಮಾಹಿತಿ ನೀಡಿದರು.
ಈ ಕುರಿತು ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಢಿದ ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ , 5 ಕೆಜಿ ಅಕ್ಕಿಯನ್ನ 2 ಕೆಜಿಗೆ ಇಳಿಸಿದ ಸರ್ಕಾರದ ನಿರ್ಧಾರದ ವಿರುದ್ಧ ಕಿಡಿಕಾರಿದರು. ಈ ಸಂಬಂಧ ಮುಖ್ಯಮಂತ್ರಿಗಳಿಗೆ ಪೋಸ್ಟ್ ಕಾರ್ಡ್ ನಲ್ಲಿ ಪತ್ರ ಬರೆಯುವ ಮೂಲಕ ಸರ್ಕಾರದ ಗಮನ ಸೆಳೆಯಲಾಗುತ್ತಿದೆ ಎಂದು ಹೇಳಿದರು.
ಹೆಚ್ಚಿನ ಪಡಿತರ ಅಕ್ಕಿ ಕೇಳಿದ ವ್ಯಕ್ತಿಗೆ ಸಾಯುವವರು ಸಾಯಲಿ ಎಂದು ಹೇಳಿಕೆ ನೀಡಿ ರಾಜ್ಯದ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದ ಉಮೇಶ್ ಕತ್ತಿ ವಿರುದ್ಧ ವಾಗ್ದಾಳಿ ನಡೆಸಿದ ಕೆ.ಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಇದು ಬಿಜೆಪಿಯವರ ಮನಃಸ್ಥಿತಿ. ಮಿಸ್ಟರ್ ಕಟೀಲ್ ಎಲ್ಲಿದ್ದೀರಿ..? ಏನಾದರೂ ಕೊರೊನಾ ಬಂದಿದೆಯಾ..? ಕಟೀಲ್ ಯೂಸ್ ಲೆಸ್ ರಾಜ್ಯಾಧ್ಯಕ್ಷ ಎಂದು ಹರಿಹಾಯ್ದರು.
ಕರ್ನಾಟಕದಲ್ಲಿ ಏನ್ ನಡೆಯುತ್ತಿದೆ ಎಂಬುದು ಸರ್ಕಾರಕ್ಕೆ ಗೊತ್ತಿಲ್ಲ. ಹುಚ್ಚರ ದರ್ಬಾರಂತೆ ಏನೇನೋ ನಿರ್ಧಾರ ಮಾಡ್ತಾರೆ. ಏಕಾಏಕಿ ಲಾಕ್ ಡೌನ್ ಅಂತಾರೆ, ಸರಿಯಾದ ನಿರ್ಣಯ ಇಲ್ಲ. ಸ್ವತಹ ಬಿಜೆಪಿ ಪಕ್ಷದ ಮುಖಂಡರು, ಸಂಸದರಿಗೂ ಗೊತ್ತಿಲ್ಲ. ರೆಸಾರ್ಟ್, ತೋಟ ಸೇರಿ ಅಲ್ಲಿ ಇಲ್ಲಿ ಸೇರಿಕೊಂಡಿದ್ದಾರೆ. ಅವರೆಲ್ಲ ಯಾರು ಕಣ್ಣಿಗೆ ಕಾಣ್ತಿಲ್ಲ. ಅವರ ಅಕೌಂಟ್ನಲ್ಲಿರುವ ದುಡ್ಡು ಝೀರೋ ಆಗವರೆಗು ಬರೋದಿಲ್ಲ ಎಂಬಂತೆ ಕಾಣ್ತಿದೆ. ಅದನ್ನ ಅವರೇ ನಿರ್ಧಾರ ಮಾಡಿಕೊಂಡಂತಿದೆ ಎಂದು ಎಂ. ಲಕ್ಷ್ಮಣ್ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ನಾಯಕರಿಗೆ ನಾಯಿಗಳಿಗೆ ಹೋಲಿಸಿದ ಎಂ.ಲಕ್ಷ್ಮಣ್….
ಕಾಂಗ್ರೆಸ್ ಸಣ್ಣ ತಪ್ಪು ಮಾಡಿದ್ರು ಬೀದಿ ನಾಯಿಗಳ ಥರ ಬೊಗಳುತ್ತ ಹೊರಗೆ ಬರುತ್ತಿದ್ರಿ. ಈಗ ರಾಜ್ಯದಲ್ಲಿ ಸಾಯುತ್ತಿರುವ ಜನರನ್ನು ನೋಡಿಯೂ ಹೊರಗೆ ಬರ್ತಿಲ್ಲ ಎಂದು ಹೇಳುವ ಮೂಲಕ ಎಂ. ಲಕ್ಷ್ಮಣ್ ಬಿಜೆಪಿ ನಾಯಕರನ್ನು ನಾಯಿಗಳಿಗೆ ಹೋಲಿಸಿದರು.
ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಆಸ್ಪತ್ರೆಗಳಿಗೆ ಕರೋನಾ ನಿಯಂತ್ರಣ ಔಷಧಿಯನ್ನು ನೀವೂ ಸರಿಯಾಗಿ ತಲುಪಿಸುತ್ತಿಲ್ಲ. ಇದು ಬಿಜೆಪಿ ಸ್ಯಾಡಿಸ್ಟ್ ಮನಸ್ಥಿತಿಯಾಗಿದೆ. ಔಷಧಿ ಹಂಚಿಕೆಯಲ್ಲು ಬಿಜೆಪಿ ಆಸ್ಪತ್ರೆ ಕಾಂಗ್ರೆಸ್ ಆಸ್ಪತ್ರೆ ಎಂದು ನೋಡುತ್ತಿರುವುದು. ನಿಮ್ಮ ಕೆಟ್ಟ ಮನಸ್ಥಿತಿಗೆ ಸಾಕ್ಷಿ ಎಂದು ಕಿಡಿಕಾರಿದರು.
Key words: rationed- rice- reduction-mysore-KPCC spokesperson -M .Laxman – against- BJP leaders