ಮೈಸೂರು, ಏಪ್ರಿಲ್,21,2025 (www.justkannada.in): ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್ ಅರ್ಪಿಸುತ್ತಿರುವ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ನಿರ್ದೇಶನದ ದಕ್ಷಿಣ ಕನ್ನಡ ಭಾಗದ ಸಂಸ್ಕೃತಿಯ ಪ್ರತೀಕವಾದ ಯಕ್ಷಗಾನ ಕಲೆಯ ಹಿನ್ನೆಲೆ, ಹಿರಿಮೆಯನ್ನು ನಾಡಿನ ಜನತೆಗೆ ಹೇಳಲು ಯಕ್ಷಗಾನ ಪ್ರಸಂಗ ಆಧಾರಿತ ವೀರ ಚಂದ್ರಹಾಸ ಚಿತ್ರ ರಾಜ್ಯಾದ್ಯಂತ ತೆರೆಕಂಡಿದ್ದು ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದೀಗ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಚಿತ್ರತಂಡ ಭೇಟಿ ಕೊಟ್ಟಿದ್ದು ರವಿ ಬಸ್ರೂರು ಅವರು ಯಕ್ಷಗಾನ ವೇಷದಲ್ಲಿ ದೇವಿಯ ದರ್ಶನ ಪಡೆದುಕೊಂಡರು.
ನಂತರ ಮಾತನಾಡಿದ ಚಿತ್ರದ ನಿರ್ದೇಶಕ ಹಾಗೂ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ವೀರ ಚಂದ್ರಹಾಸ ನನ್ನ ಸುಮಾರು ವರ್ಷಗಳ ಕನಸು, ಯಕ್ಷಗಾನವನ್ನು ವಿಶ್ವಮಾನ್ಯ ಮಾಡಬೇಕೆಂದು ಈ ಚಿತ್ರವನ್ನು ನಿರ್ದೇಶನ ಮಾಡಿದ್ದೇನೆ. ಈ ಚಿತ್ರದ ಎಲ್ಲಾ ಪಾತ್ರಗಳನ್ನು ನಿಜವಾದ ವೃತ್ತಿಪರ ಯಕ್ಷಗಾನ ಕಲಾವಿದರೆ ನಿರ್ವಹಿಸಿದ್ದಾರೆ, ಹಾಗಾಗಿ ಇಡಿ ಚಿತ್ರ ತುಂಬಾ ನೈಜ್ಯವಾಗಿ ಮೂಡಿಬಂದಿದ್ದು, ವಿಶೇಷ ಪಾತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಅಭಿನಯಿಸುವ ಮೂಲಕ ನಮಗೆ ಆಶೀರ್ವಾದಿಸಿದ್ದಾರೆ ಎಂದು ಹೇಳಿದರು.
ನಂತರ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಅವಧೂತ ಅರ್ಜುನ್ ಗುರೂಜಿ ಅವರ ಆಶೀರ್ವಾದ ಪಡೆದು ಅವರ ಜೊತೆ DRC ಮಾಲ್ ನಲ್ಲಿ ಪ್ರೇಕ್ಷಕರ ಜೊತೆ ಚಿತ್ರ ವೀಕ್ಷಿಸಿದರು. ಈ ಸಂದರ್ಭದಲ್ಲಿ ಚಿತ್ರತಂಡ ಹಾಗೂ ಕಲಾವಿದ ಪ್ರಕಾಶ್ ಚಿಕ್ಕಪಾಳ್ಯ, ಸಮಾಜ ಸೇವಕರಾದ ಜೋಗಿ ಮಂಜು, ರಿಷಿ ವಿಶ್ವಕರ್ಮ, ವಿಕ್ರಂ ಅಯ್ಯಂಗಾರ್, ಮಹಾನ್ ಶ್ರೇಯಸ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Key words: Music director, Ravi Basrur,Team, visited, Chamundi hills, Mysore