ಬೆಂಗಳೂರು, ಆಗಸ್ಟ್ 05, 2022 (www.justkannada.in): ರೆಪೋ ದರ ಏರಿಕೆಯಿಂದ ಗೃಹ, ವಾಹನ ಸಾಲಗಳ ಬ್ಯಾಂಕ್ಗಳ ಇಎಂಐ ಮೊತ್ತ ಮತ್ತಷ್ಟು ದುಬಾರಿಯಾಗಲಿದ್ದು, ಜನ ಸಾಮಾನ್ಯರ ಜೇಬಿಗೆ ಹೊರೆಯಾಗಲಿದೆ.
ಆರ್ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ)ಯ ಮೂರು ದಿನಗಳ ಸಭೆಯ ಬಳಿಕ ರೆಪೋ ದರ ಏರಿಕೆ ನಿರ್ಧಾರವನ್ನು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಶುಕ್ರವಾರ ಪ್ರಕಟಿಸಿದ್ದಾರೆ.
ಆರ್ಥಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಹಣದುಬ್ಬರವನ್ನು ಗುರಿಯೊಳಗೆ ಇರಿಸಿಕೊಳ್ಳುವತ್ತ ಗಮನಹರಿಸಲು ಎಂಪಿಸಿ ನಿರ್ಧರಿಸಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಇದು ಆರ್ಬಿಐನ ಮೂರನೇ ರೆಪೋ ದರ ಏರಿಕೆಯಾಗಿದೆ. ಕಳೆದ ಜೂನ್ ತಿಂಗಳಲ್ಲಿ 50 ಮೂಲಾಂಶಗಳ ಏರಿಕೆಯೊಂದಿಗೆ ರೆಪೋ ದರ 4.90 ರಷ್ಟಿತ್ತು. ಇದೀಗ 50 ಮೂಲಾಂಶ ಏರಿಕೆಯೊಂದಿಗೆ 5.40 ರಷ್ಟಾಗಿದೆ.