ನವದೆಹಲಿ,ಡಿಸೆಂಬರ್,6,2024 (www.justkannada.in): ರೆಪೋದರದಲ್ಲಿ ಯಾವುದೇ ಬದಲಾವಣೆ ಇಲ್ಲ ರೆಪೋ ದರ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ಘೋಷಣೆ ಮಾಡಿದ್ದಾರೆ.
ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದ ಆರ್ ಬಿಐ ಹಣಕಾಸು ನೀತಿ ಸಮಿತಿಯು ರೆಪೊ ದರವನ್ನು 6.5% ಕ್ಕೆ ಬದಲಾಯಿಸದೆ ಉಳಿಸಿಕೊಂಡಿದೆ. ಈ ಮೂಲಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತೊಮ್ಮೆ ತನ್ನ ರೆಪೊ ದರವನ್ನು ಶೇಕಡಾ 6.50 ಕ್ಕೆ ಉಳಿಸಿಕೊಂಡಿದೆ.
ಈ ಬಾರಿಯೂ ಬ್ಯಾಂಕ್ ಬಡ್ಡಿದರದಲ್ಲಿ ಬದಲಾವಣೆ ಇಲ್ಲ. 2023ರಲ್ಲಿ ರೆಪೋದರ 6.50ಕ್ಕ ಏರಿಕೆಯಾಗಿತ್ತು. ಸ್ಥೂಲ ಆರ್ಥಿಕ ದೃಷ್ಟಿಕೋನದ ವಿವರವಾದ ಮೌಲ್ಯಮಾಪನದ ನಂತರ ಎಂಪಿಸಿ ರೆಪೊ ದರವನ್ನು ಬದಲಾಯಿಸದೆ ಇರಲು 4:2 ರಿಂದ ನಿರ್ಧರಿಸಿತು ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.
Key words: RBI, repo rate, Shaktikanta Das