ಬೆಂಗಳೂರು,ಮಾರ್ಚ್,20,2021(www.justkannada.in) : ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ‘ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್’ (NRLM) ಜಾರಿಗೆ ತಂದಿತು. ಪ್ರಸ್ತುತ ಸರ್ಕಾರವು ಈ ಯೋಜನೆಗೆ ‘ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ’ ಎಂದು ಮರು ನಾಮಕರಣ ಮಾಡಿದೆ ಎಂದು ಶಾಸಕ ತನ್ವೀರ್ ಸೇಠ್ ಟೀಕಿಸಿದ್ದಾರೆ.
ಗ್ರಾಮೀಣ ಬಡವರ ಸ್ವ-ಉದ್ಯೋಗ ಮತ್ತು ಸಂಘಟನೆಯನ್ನು ಉತ್ತೇಜಿಸುವ ಮೂಲಕ ಬಡತನ ನಿರ್ಮೂಲನೆಯ ಗುರಿಯೊಂದಿಗೆ 2011ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ‘ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್’ (NRLM) ಜಾರಿಗೆ ತಂದಿತು ಎಂದು ತಿಳಿಸಿದ್ದಾರೆ.
key words : Re-nominated-current-government-Congress-project-Legislator-
Tanveer Seth