ಮಂಡ್ಯದ ಅಭಿವೃದ್ಧಿಗೆ ಯಾವುದೇ ತ್ಯಾಗಕ್ಕೂ ನಾವು ಸಿದ್ದ- ಸಚಿವ ಅಶ್ವಥ್ ನಾರಾಯಣ್.

ಬೆಂಗಳೂರು,ನವೆಂಬರ್,28,2022(www.justkannada.in): ಅತಿ ಹೆಚ್ಚು ಸಾಲ, ಅತಿ ಹೆಚ್ಚು ಆತ್ಮಹತ್ಯೆ ನಡೆಯುವ ಜಿಲ್ಲೆ ಮಂಡ್ಯ. ಅತಿ ಹೆಚ್ಚು ನಾಯಕತ್ವ ಕೊಡುವ ಜಿಲ್ಲೆಯೂ ಇದೆ. ಮಂಡ್ಯದ ಅಭಿವೃದ್ಧಿಗೆ ನಾವು ಯಾವುದೇ ತ್ಯಾಗಕ್ಕೂ ಸಿದ‍್ಧ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ತಿಳಿಸಿದರು.

ಸಂಸದೆ ಸುಮಲತಾ ಅಂಬರೀಶ್ ಅವರ ಆಪ್ತ ಇಂಡುವಾಳು ಸಚ್ಚಿದಾನಂದ ಅವರು ಇಂದು ಬಿಜೆಪಿ ಸೇರ್ಪಡೆಯಾದರು.  ಈ ವೇಳೆ ಪಕ್ಷದ ಬಾವುಟ ಹಾಗೂ ಶಾಲು ಹೊದಿಸಿ ಸಚಿವರಾದ ಸಿ.ಎನ್.ಅಶ್ವಥ್ ನಾರಾಯಣ್, ನಾರಾಯಣಗೌಡ, ಗೋಪಾಲಯ್ಯ ಮತ್ತು ಸಿ.ಪಿ.ಯೋಗೀಶ್ವರ್ ಪಕ್ಷಕ್ಕೆ ಬರಮಾಡಿಕೊಂಡರು.

ಬಳಿಕ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ನಾವು ಸ್ವಾಭಿಮಾನದ ಪ್ರತೀಕವಾಗಬೇಕು.ಮಂಡ್ಯ ಅಭಿವೃದ್ಧಿಗೆ ಯಾವುದೇ ತ್ಯಾಗಕ್ಕೂ ನಾವು ಸಿದ್ದ, ತಲೆ ಕೊಡುವುದಕ್ಕೂ ರೆಡಿ ಇದ್ದೇವೆ. ಮಂಡ್ಯದಲ್ಲಿ ದುಡ್ಡು ನಡೆಯಲ್ಲ , ಸ್ವಾಭಿಮಾನ ಅಷ್ಟೆ ಎಂದರು.

ಮೈಶುಗರ್ ಕಾರ್ಖಾನೆಯನ್ನು ಯಾವ ರೀತಿ ಮಾಡಿದರೆಂದು ಗೊತ್ತಿದೆ. ಬೇರೆ ಪಕ್ಷದವರು ತಾವೂ ಕೆಲಸ ಮಾಡಲ್ಲ, ಮಾಡುವವರನ್ನೂ ಬಿಡಲ್ಲ. ಪಾಂಡವಪುರದ ಸಕ್ಕರೆ ಕಾರ್ಖಾನೆ ಏನು ಮಾಡಿದರು ಎಂದು ಗೊತ್ತು. ಇನ್ನೊಬ್ಬರ ರಕ್ತ ಹೀರುವವರನ್ನು ನಾಯಕ ಎಂದು ಕರೆಯುತ್ತೀರಾ ಎಂದು ಅಶ್ವಥ್   ನಾರಾಯಣ ಕಿಡಿಕಾರಿದರು.

Key words: ready development –Mandya- Minister -Aswath Narayan

ENGLISH SUMMARY….

We are ready for any kind of sacrifice for the development of Mandya: Minister Ashwathnarayan
Bengaluru, November 28, 2022 (www.justkannada.in): “Number of farmer’s suicides due to loans is more in Mandya District. It is also the district which produces highest number of political leaders too. We are ready for any kind of sacrifice for the development of Mandya District,” observed Higher Education Minister Dr. Ashwathnarayana.
Mr. Induvalu Sachchidananda, a close aide of Mandya MP Sumalatha Ambareesh officially joined the BJP today. The Minister Ashwathanaryana welcomed him by handing over the party flag and a shawl, in the presence of Ministers Narayanagowda, Gopalaiah and C.P. Yogeshwar.
“We should symbolize self-esteem. Please tell us what are your demands. We are ready for any kind of sacrifice. Money won’t work in Mandya, only self-esteem works, I know,” he said.
“We know what they did to the MySugar factory. The opposite parties won’t work, or allow others to work. You also know what happened to the Pandavapura Sugar factory. Will you call a person who fleeces the blood of others as a leader?” he questioned.
Keywords: Minister Ashwathnarayan/ Mandya District/ Sacrifice