ನವದೆಹಲಿ,ಡಿಸೆಂಬರ್,10,2020(www.justkannada.in): ಅನ್ನದಾತರ ಶ್ರೇಯೋಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಕೃಷಿ ತಿದ್ದುಪಡಿ ಕಾಯ್ದೆಯಲ್ಲಿನ ಆಕ್ಷೇಪವಿರುವ ಅಂಶಗಳ ಬಗ್ಗೆ ಮರುಪರಿಶೀಲನೆ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.
ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರ ಪ್ರತಿಭಟನೆ ಹಿನ್ನೆಲೆ ಈ ಕುರಿತು ಇಂದು ಮಾತನಾಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕೇಂದ್ರ ಸರ್ಕಾರ ಪ್ರತಿಭಟನಾ ನಿರತ ರೈತರಿಗೆ ಕಳುಹಿಸಿದ ಕರಡು ಪ್ರಸ್ತಾವನೆಗೆ ಆಕ್ಷೇಪ ವ್ಯಕ್ತ ಪಡಿಸಿದ ನಂತರ, ರೈತರೊಂದಿಗೆ ಪರಿಹಾರದ ಕುರಿತಂತೆ ಚರ್ಚಿಸಲು ನಾವು ಸಿದ್ಧರಿದ್ದೇವೆ. ಕೃಷಿ ತಿದ್ದುಪಡಿ ಕಾಯ್ದೆಯ ಕೆಲ ಅಂಶಗಳ ಬಗ್ಗೆ ಚರ್ಚೆಗೆ ಸಿದ್ಧ. ಹೊಸಕಾಯ್ದೆಯನ್ನ ಇಡೀ ದೇಶವೇ ಸ್ವಾಗತಿಸಿದೆ. ಕೃಷಿ ಕ್ಷೇತ್ರ ಉನ್ನತೀಕರಣಕ್ಕಾಗಿ ಈ ಕಾಯ್ದೆ ಅಗತ್ಯವಾಗಿದೆ ಎಂದು ತಿಳಿಸಿದರು.
ಜಮೀನು ಕಾರ್ಪೋರೇಟ್ ಪಾಲಾಗುವ ಭಯವಿದೆ. ಆದರೆ ಆ ರೀತಿ ಆಗಲ್ಲ ಎಂದು ಭರವಸೆ ನೀಡುತ್ತೇನೆ. APMC ತಿದ್ದುಪಡಿ ಕಾಯ್ದೆ, MSP ಗಳ ಮೇಲೆ ಪರಿಣಾಮ ಬೀರುವುದಿಲ್ಲ. ಇದನ್ನು ರೈತರಿಗೆ ವಿವರಿಸಲು ಪ್ರಯತ್ನಪಟ್ಟೆವು. ಆದ್ರೇ ಇದನ್ನು ರೈತರು ಅರ್ಥಮಾಡಿಕೊಳ್ಳದೇ, ಪ್ರತಿಭಟನೆ ಮುಂದುವರಿಸಿದ್ದಾರೆ. ರೈತರ ಜತೆ ಚರ್ಚಿಸಲು ಸಿದ್ಧರಿದ್ದೇವೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದರು.
Key words: Ready -discussion – some aspects – Agricultural Amendment Act-Union Agriculture Minister- Narendra Singh Tomar