ನವದೆಹಲಿ,ಸೆಪ್ಟಂಬರ್,15,2020(www.justkannada.in): ಚೀನಾ-ಭಾರತ ಗಡಿ ವಿವಾದ ಗಂಭೀರವಾಗಿದ್ದು, ಗಡಿ ಬಿಕ್ಕಟ್ಟಿನ ಎಲ್ಲಾ ಪರಿಸ್ಥಿತಿ ನಿಭಾಯಿಸಲು ಸಿದ್ಧ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಇಂದು ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತ-ಚೀನಾ ಗಡಿ ವಿವಾದ ಜಟಿಲವಾಗುತ್ತೆ. ಗಡಿ ವಿಚಾರವಾಗಿ ಭಾರತ ಮತ್ತು ಚೀನಾ ನಡುವೆ ಹಲವು ಭಿನ್ನಾಭಿಪ್ರಾಯವಿದೆ. ಎರಡು ದೇಶಗಳ ನಡುವೆ ಶಾಂತಿಯುತ ಮಾತುಕತೆ ಮೂಲಕ ಸಹಮತ ಮೂಡಿಸುವ ಯತ್ನ ನಡೆದಿತ್ತು. ಆದರೇ ಚೀನಾ ಮಾತುಕತೆ ಮುನ್ನಡೆಸಲಿಲ್ಲ. ಗಡಿರೇಖೆ ಬಗ್ಗೆ ಸ್ಪಷ್ಟವಾಗಿಲ್ಲ. ಚೀನಾಗೆ ಸ್ಪಷ್ಟವಾಗಬೇಕಿಲ್ಲ. ಚೀನಾ-ಭಾರತ ಗಡಿ ವಿವಾದ ಗಂಭೀರವಾಗಿದ್ದು, ನಮಗೆ ಶಾಂತಿಯುತ ಪರಿಹಾರ ಬೇಕಿದೆ ಎಂದು ಹೇಳಿದರು.
ಚೀನಾ-ಭಾರತ ಗಡಿ ಸಂಘರ್ಷ ಇನ್ನೂ ಮುಗಿದಿಲ್ಲ. ಇದಕ್ಕೆ ಚೀನಾ ದೇಶವೇ ಕಾರಣವಾಗಿದ್ದು, ನಮಗೆ ಶಾಂತಿಯುತ ಪರಿಹಾರ ಬೇಕಿದೆ. ಗಡಿಯಲ್ಲಿ ಕಡಿಮೆ ಸೈನಿಕರ ನಿಯೋಜನೆ ಬಗ್ಗೆ ಒಪ್ಪಂದ. ಆದರೇ ಚೀನಾ ಚೀನಾ ಸೇನೆ ನಿಯೋಜನೆಯನ್ನು ಏಪ್ರಿಲ್‌ನಿಂದ ಹೆಚ್ಚಳವಾಗಿದ್ದು, ಶಸ್ತ್ರಾಸ್ತ್ರಗಳ ಸಂಗ್ರಹ ಹೆಚ್ಚಿಸಿದೆ. ಹಾಗಾಗಿ ಯಥಾಸ್ಥಿತಿ ಕಾಪಾಡಲು ಭಾರತ ಎಚ್ಚರಿಕೆ ನೀಡಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
Key words: Ready -situation – border- crisis-Defense Minister -Rajanath Singh.