ನಮ್ಮ ನಿಜವಾದ ಹೀರೋ ಗಳೆಂದರೆ ಅದು ಅಗ್ನಿ‌ಶಾಮಕ ದಳದ ಸಿಬ್ಬಂದಿಗಳು : ನಾಗಶ್ರೀ ನಿಖಿಲೇಶ್

ಮೈಸೂರು,ಜೂನ್,27,2024 (www.justkannada.in): ನಾವುಗಳು ಬೆಂಕಿ ಹೊತ್ತಿದೆ ಎಂದು ಮನೆಗಳಿಂದ ಹೊರಗೆ ಬರುತ್ತೇವೆ ಆದರೆ ತಮ್ಮ ಪ್ರಾಣವನ್ನು ಲೆಕ್ಕಿಸದೆ ಒಳಗೆ ಹೋಗಿ ಬೆಂಕಿ‌ನಂದಿಸುವ ಕಾರ್ಯವನ್ನು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಮಾಡುತ್ತಾರೆ ಅವರು ನಮ್ಮ ನಿಜವಾದ ಹಿರೋಗಳು ಎಂದು ಮೈಸೂರು ಲೇಡೀಸ್ ಸರ್ಕಲ್ ಒಂಬತ್ತರ ಅಧ್ಯಕ್ಷೆ ಶ್ರೀಮತಿ ನಾಗಶ್ರೀ ನಿಕಿಲೇಶ್ ತಿಳಿಸಿದರು.

ಇಂದು ಮೈಸೂರು ಲೇಡೀಸ್ ಸರ್ಕಲ್ – 09 ರ ವತಿಯಿಂದ ಮೈಸೂರಿನ ಸರಸ್ವತಿಪುರಂನಲ್ಲಿರುವ ಅಗ್ನಿಶಾಮಕ ಠಾಣೆಯ ನವೀಕೃತ ಮತ್ತು ಮರು-ಬಣ್ಣದ ಕಾಂಪೌಂಡ್ ಗೋಡೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು,  ಜನರ ರಕ್ಷಣೆಯಲ್ಲಿ ಮುಖ್ಯ ಪಾತ್ರ ವಹಿಸುವ ಅಗ್ನಿ ಶಾಮಕ ದಳದ ಕಾರ್ಯ ನಿಜಕ್ಕೂ ಶ್ಲಾಘನೀಯ. ನಾವು ನಮ್ಮ ಮೈಸೂರು ಲೇಡೀಸ್ ಸರ್ಕಲ್ – 09 ಸಂಸ್ಥೆಯ ವತಿಯಿಂದ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದು ಇಂದು ಸರಸ್ವತಿಪುರಂ ನಲ್ಲಿರುವ ಅಗ್ನಿ ಶಾಮಕ ದಳದ ನವೀಕೃತ ಕಾಂಪೌಂಡ್ ಗಳಿಗೆ ಮತ್ತು ಗೋಡೆಗಳಿಗೆ ಮರು-ಬಣ್ಣದ ಜೊತೆಗೆ ಅಗ್ನಿ ಶಾಮಕದಳದ ಕಾರ್ಯ ವೈಖರಿಗಳನ್ನು ಒಳಗೊಂಡಂತ ಪೋಸ್ಟರ್ ಗಳನ್ನು ಗೋಡೆಗಳ ಅಳವಡಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ ಮಾಡಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಮೈಸೂರು ಹೆಚ್ಚುವರಿ ಜಿಲ್ಲಾಧಿಕಾರಿ, ಡಾ.ಪಿ ಶಿವರಾಜು, ನಿಕಿಲೇಶ್, ಮೈಸೂರು ವಲಯದ ಮುಖ್ಯ ಅಗ್ನಿಶಾಮಕ ಅಧಿಕಾರಿ ಜಯರಾಮ್ , ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಚಂದನ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ  ಗುರುರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Key words:  real heroes, firemen, Nagashree Nikhilesh