ರೆಬೆಲ್ಸ್ ನಾಯಕರು ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ: ಯತ್ನಾಳ್ ಉಚ್ಚಾಟನೆಗೆ ಎಂ.ಪಿ ರೇಣುಕಾಚಾರ್ಯ ಆಗ್ರಹ

ಬೆಂಗಳೂರು,ಫೆಬ್ರವರಿ,5,2025 (www.justkannada.in): ರಾಜ್ಯ ಬಿಜೆಪಿಯ‍ಲ್ಲಿ ಬಣ ಬಡಿದಾಟ ಹೆಚ್ಚುತ್ತಿದ್ದು ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ದ ವಾಗ್ದಾಳಿ ನಡೆಸಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಗುಡುಗಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎಂ.ಪಿ ರೇಣುಕಾಚಾರ್ಯ, ರೆಬೆಲ್ಸ್ ನಾಯಕರು ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ಇವರು ದೆಹಲಿ ದಂಡಯಾತ್ರೆ ಮಾಡುತ್ತಿರುವ ದಂಡಪಿಂಡಗಳು ಎಂದು ಕಿಡಿಕಾರಿದ್ದಾರೆ. ಹಾಗೆಯೇ ಶಾಸಕ ಯತ್ನಾಳ್ ಉಚ್ಚಾಟನೆಗೆ ಎಂ.ಪಿ ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

ಪ್ರಭಾವಿ ಸಚಿವರೊಂದಿಗೆ ಯತ್ನಾಳ್ ಒಪ್ಪಂದ

ಹಾಗೆಯೇ ಶಾಸಕ ಯತ್ನಾಳ್ ವಿರುದ್ದ ಅಸಮಾಧಾನ ಹೊರ ಹಾಕಿದ ಎಂಪಿ ರೇಣುಕಾಚಾರ್ಯ, ಯತ್ನಾಳ್ ಅವರೇ, ನೀವು ಬಬಲೇಶ್ವರ ಕ್ಷೇತ್ರದವರು ಆದರೆ ನೀವು ಯಾಕೆ ಅಲ್ಲಿ ಸ್ಪರ್ಧೆ ಮಾಡುತ್ತಿಲ್ಲ? ಯಾಕಂದರೆ ಅಲ್ಲಿ ನೀವು ಕಾಂಗ್ರೆಸ್ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡ್ಕೊಂಡಿದ್ದೀರಿ. ಅಪ್ಪು ಪಟ್ಟಣ್ ಶೆಟ್ಟಿಗೆ ಟಿಕೆಟ್ ಕೊಟ್ಟಿದ್ರೆ ನೀನು ಎಂಎಲ್‌ಎ ಆಗ್ತಿರಲಿಲ್ಲ ಎಂದು ಹೇಳುವ ಮೂಲಕ ಬಬಲೇಶ್ವರ ಕ್ಷೇತ್ರದಿಂದ ಆಯ್ಕೆಯಾಗುವ ಸಚಿವ ಎಂಬಿ ಪಾಟೀಲ್ ಹಾಗೂ ಯತ್ನಳ್ ನಡುವೆ ಒಳ ಒಪ್ಪಂದವಿದೆ ಎಂಬ ಗಂಭೀರ ಆರೋಪ ಮಾಡಿದರು.

ಯತ್ನಾಳ್ ನೀವು ಬಸ್ ಡ್ರೈವರ್ ಆಗಿದ್ರಿ ನೀವು ಸಕ್ಕರೆ ಖಾರ್ಕಾನೆ ಹೇಗೆ ಮಾಡಿದ್ರಿ. ಈ ಹಿಂದೆ ಸಸ್ಪೆಂಡ್ ಆಗಿ ಯಡಿಯೂರಪ್ಪ ನವರ ಕಾಲು ಹಿಡಿದವರು? ಮಿಸ್ಟರ್ ಯತ್ನಾಳ್  ಇದು ಸರಿಯಲ್ಲ. ನಾಲಿಗೆ ಬಿಗಿ ಹಿಡಿದು ಮಾತಾಡು ಎಂದು ಹರಿಹಾಯ್ದರು.

Key words: Rebels leaders, mentally, ill, MP Renukacharya