ಮೈಸೂರು, ಸೆ.30, 2020 : (www.justkannada.in news) : ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮತ್ತು ಸಂಶೋಧಕರ ತಂಡದ ‘ಕೋವಿಡ್ -19 ‘ ಕುರಿತಾದ ಸಂಶೋಧನಾ ಲೇಖನ ಅಂತಾರಾಷ್ಟ್ರೀಯ ಜರ್ನಲ್ ನಲ್ಲಿ ಪ್ರಕಟವಾಗಿದ್ದು, ಆ ಮೂಲಕ ಗಮನ ಸೆಳೆದಿದೆ.
‘ Rebooting the world with information tools during covid-19 ‘ ಎಂಬ ಸಂಶೋಧನ ಲೇಖನವೇ ಅಂತರಾಷ್ಟ್ರೀಯ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವುದು. ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹಾಗೂ ಸೈಂಟಿಫಿಕ್ ಆಫೀಸರ್ ಡಾ.ನವೀನ್ ಮತ್ತು ಸಂಶೋಧನಾ ತಂಡದ ಲೇಖನ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವುದು. ಅ್ಯಂಬಿಸ್ಪೀಯರ್ ರಿಸರ್ಚ್ ಲ್ಯಾಬೋರೇಟರಿ ಜರ್ನಲ್ ನ ಈ ಸಂಶೋಧನಾ ವರದಿಯನ್ನು ರಾಯಲ್ ಬುಕ್ ಪಬ್ಲಿಷರ್ ಪ್ರಕಟಿಸಿದೆ.
ಈ ಸಂಶೋಧನಾ ಲೇಖನವು ಪ್ರಸ್ತುತ ಸಂದರ್ಭದ ಸಂಶೋಧನೆಗೆ ಬಹಳ ಸಹಕಾರಿಯಾಗಿದ್ದು, ಗ್ರಾಮೀಣ ಪ್ರದೇಶದ ಜನರಿಗೆ ಮಾಹಿತಿ ಲಭ್ಯತೆಯೇ ಮುಖ್ಯ ಉದ್ದೇಶವಾಗಿದ್ದು, ಆರ್ಟಿಫಿಷಿಯಲ್ ಇಂಟಲಿಜೆನ್ಸ್ , IOT (Internet of Things ) ಹಾಗೂ ಕ್ಲೌಡ್ ಕಂಪೂಟಿಂಗ್ ವೆಬ್ ಬೇಸ್ಡ್ ಲರ್ನಿಂಗ್ ಟೂಲ್ಸ್..ಮುಂತಾದ ಪ್ರಯೋಗಗಳನ್ನು ಉಪಯೋಗಿಸಿದ್ದು, ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹಾಗೂ ತಂಡದ ಸಂಶೋಧನೆಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.
ಈ ಬಗ್ಗೆ ಜಸ್ಟ್ ಕನ್ನಡ ಡಾಟ್ ಇನ್ ಜತೆ ಮಾತನಾಡಿದ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಪ್ರಸ್ತುತ ಅಧ್ಯಾಯವು COVID-19 ರ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಮಾಹಿತಿ ತಂತ್ರಜ್ಞಾನಗಳ ನಿದರ್ಶನವನ್ನು ರೂಪಿಸುತ್ತದೆ, ಪರಿಸ್ಥಿತಿಯನ್ನು ಎದುರಿಸಲು ಬಳಸಲಾಗುವ ಮಾಹಿತಿ ವಿಜ್ಞಾನದ ವಿವಿಧ ಸಾಧನಗಳ ಬಗ್ಗೆ ಅಧ್ಯಾಯವು ಪ್ರಮುಖವಾಗಿ ಗಮನ ಸೆಳೆಯುತ್ತದೆ ಎಂದರು.
ವಿಶ್ವ ಆರೋಗ್ಯ ಸಂಸ್ಥೆಯಂಥ (WHO) ಆಡಳಿತ ಮಂಡಳಿಗಳು ಮಾಹಿತಿ ವಿಜ್ಞಾನದ ತಂತ್ರಗಳ ಮೇಲೆ ಹೆಚ್ಚು ಅವಲಂಬಿತವಾಗಿವೆ ಮತ್ತು ನಿಖರವಾದ ಮಾಹಿತಿಯನ್ನು ಜಗತ್ತಿನಾದ್ಯಂತ ಪ್ರಸಾರ ಮಾಡುತ್ತವೆ. ಈ ಸಂಗತಿಗಳು ಮತ್ತು ಪರಿಗಣನೆಯ ಆಧಾರದ ಮೇಲೆ. ಮಾಹಿತಿ ವಿಜ್ಞಾನದ ತಾಂತ್ರಿಕ ಪ್ರಗತಿ ಮತ್ತು ಪ್ರಪಂಚದ ಚಟುವಟಿಕೆಗಳನ್ನು ಸಾಮಾನ್ಯ ಸ್ಥಿತಿಗೆ ರೀಬೂಟ್ ಮಾಡುವಲ್ಲಿ ಅದರ ಪಾತ್ರವನ್ನು ಉಲ್ಲೇಖಿಸಲು ಈ ಅಧ್ಯಯನವನ್ನು ಪ್ರಸ್ತುತಪಡಿಸಲಾಗಿದೆ ಎಂದು ಪ್ರೊ.ಹೇಮಂತ್ ಕುಮಾರ್ ವಿವರಿಸಿದರು.
—————
key words : ‘ Rebooting the world with information tools during covid-19 ‘-vc-uom-prof.hemanth.kumar-covid-19-WHO